Advertisement

ಒಂದೇ ಟೈಟಲ್‌; ಎರಡು ಚಿತ್ರಗಳು

11:22 AM Apr 11, 2018 | |

ಸಂಯುಕ್ತಾ ಹೊರನಾಡು “ಒಂದ್‌ ಕಥೆ ಹೇಳ್ಲಾ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರವನ್ನು ನಿನ್ನೆಯಷ್ಟೇ ಬಾಲ್ಕನಿಯಲ್ಲಿ ಓದಿದ್ದೀರಿ. ಆ ಚಿತ್ರ ಇಂದು ಸೆಟ್ಟೇರುತ್ತಿದೆ. ಈ ನಡುವೆಯೇ ಆ ಚಿತ್ರದ ಶೀರ್ಷಿಕೆಯ ಕುರಿತು ವಿವಾದವೊಂದು ಹುಟ್ಟಿಕೊಂಡಿದೆ. ಈಗಾಗಲೇ ಚಿತ್ರತಂಡವೊಂದು “ಒಂದ್‌ ಕಥೆ ಹೇಳ್ಲಾ’ ಟೈಟಲ್‌ನಡಿ ಸಿನಿಮಾ ಆರಂಭಿಸಿ, ಬಹುತೇಕ ಚಿತ್ರೀಕರಣ ಮುಗಿಸಿಬಿಟ್ಟಿದೆ.

Advertisement

ಚಿತ್ರದ ಶೀರ್ಷಿಕೆ ಕೂಡಾ ಆ ಚಿತ್ರತಂಡದವರ ಬ್ಯಾನರ್‌ನಲ್ಲೇ ಇದೆ. ಹೀಗಿರುವಾಗ ಮತ್ತೂಂದು ಚಿತ್ರತಂಡ ಅದೇ ಶೀರ್ಷಿಕೆಯಡಿ ಸಿನಿಮಾ ಮಾಡಲು ಹೇಗೆ ಸಾಧ್ಯ ಆ ಚಿತ್ರದ ನಿರ್ದೇಶಕ ಗಿರೀಶ್‌ ಮಾತು. ಇಂದು ಸೆಟ್ಟೇರುತ್ತಿರುವ “ಒಂದು ಕಥೆ ಹೇಳ್ಲಾ’ ಚಿತ್ರವನ್ನು ತಮಿಳಿನ ಕೃಷ್ಣ ಸಾಯಿ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಇನ್ನು, ಈಗಾಗಲೇ ಚಿತ್ರೀಕರಣ ಮುಗಿಸಿರುವ ಅದೇ ಟೈಟಲ್‌ನ ಸಿನಿಮಾವನ್ನು ಗಿರೀಶ್‌ ಎನ್ನುವವರು ನಿರ್ದೇಶಿಸಿದ್ದಾರೆ.

ತಮ್ಮ ಟೈಟಲ್‌ ಅನ್ನು ಅನುಮತಿ ಇಲ್ಲದೇ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿರುವ ನಿರ್ದೇಶಕ ಕೃಷ್ಣ ಸಾಯಿ ಮೇಲೆ ಗಿರೀಶ್‌ ಗರಂ ಆಗಿದ್ದಾರೆ. “ನಾವು ಕಳೆದ ವರ್ಷ ಅಕ್ಟೋಬರ್‌ 28 ರಂದು ಮಂಡಳಿಯಲ್ಲಿ “ಒಂದ್‌ ಕಥೆ ಹೇಳ್ಲಾ’ ಟೈಟಲ್‌ ನೋಂದಣಿ ಮಾಡಿಸಿದ್ದೇವೆ. ಅದರಂತೆ ಚಿತ್ರೀಕರಣ ಆರಂಭಿಸಿ, ನವೆಂಬರ್‌ ವೇಳೆಗೆ ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದ್ದೇವೆ.

ಟೈಟಲ್‌ ನೋಂದಣೆಯಾಗಿ ಒಂದು ವರ್ಷ ಕೂಡಾ ಆಗಿಲ್ಲ. ಈಗ ನಮ್ಮ ಅನುಮತಿ ಇಲ್ಲದೇ ಮತ್ತೂಂದು ಚಿತ್ರತಂಡ ಅದೇ ಶೀರ್ಷಿಕೆಯಡಿ ಸಿನಿಮಾ ಆರಂಭಿಸುತ್ತಿದೆ. ಒಂದು ಶೀರ್ಷಿಕೆ ಮತ್ತೂಬ್ಬರ ಬಳಿ ಇರುವಾಗ ಇನ್ನೊಂದು ಚಿತ್ರತಂಡ ಅದೇ ಟೈಟಲ್‌ನಡಿ ಸಿನಿಮಾ ಮಾಡಲು ಹೇಗೆ ಸಾಧ್ಯ. ಈ ಬಗ್ಗೆ ಮಂಡಳಿಯಲ್ಲಿ ವಿಚಾರಿಸಿದಾಗ “ಒಂದ್‌ ಕಥೆ ಹೇಳ್ಲಾ’ ಟೈಟಲ್‌ ನಾವು ಸಿನಿಮಾ ಮಾಡುತ್ತಿರುವ “ಪೇಟಾಸ್‌ ಸಿನಿಕೆಫೆ’ ಬ್ಯಾನರ್‌ನಲ್ಲೇ ಇದೆ.

ಬೇರೆ ಯಾರ ಬ್ಯಾನರ್‌ನಲ್ಲೂ ಆ ಟೈಟಲ್‌ ಇಲ್ಲ. ಹಾಗಿದ್ದರೂ ಬೇರೆಯವರು ಆ ಟೈಟಲ್‌ ಇಟ್ಟುಕೊಳ್ಳುವುದಕ್ಕೆ ಹೇಗೆ ಸಾಧ್ಯ’ ಎಂಬುದು ಗಿರೀಶ್‌ ಪ್ರಶ್ನೆ. ಗಿರೀಶ್‌ ಯಾವ ಕಾರಣಕ್ಕೂ ಆ ಟೈಟಲ್‌ ಬಿಟ್ಟುಕೊಡಲು ಸಿದ್ಧರಿಲ್ಲ. ಆ ಟೈಟಲ್‌ನಡಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ. ತಮ್ಮ ಅನುಮತಿ ಇಲ್ಲದೇ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವ ನಿರ್ದೇಶಕ ಕೃಷ್ಣ ಸಾಯಿ ಅವರಲ್ಲಿ ಮಾತನಾಡಿ,

Advertisement

ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳುತ್ತಾರೆ ಗಿರೀಶ್‌. ಅಂದಹಾಗೆ, ಗಿರೀಶ್‌ ನಿರ್ದೇಶನ “ಒಂದ್‌ ಕಥೆ ಹೇಳ್ಲಾ’ ಚಿತ್ರದಲ್ಲಿ ತಾಂಡವ್‌ ರಾಮ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಜೂನ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next