Advertisement

IPL 2024; ವೈಡ್ ವಿವಾದ: ಅಂಪೈರ್ ಜತೆ ಜಗಳವಾಡಿದ ಗುಜರಾತ್ ನಾಯಕ ಗಿಲ್

08:59 AM Apr 11, 2024 | Team Udayavani |

ಜೈಪುರ: ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡವು ಬುಧವಾರ ಗೆಲುವಿನ ನಗೆ ಬೀರಿದೆ. ಕೂಟದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿದ ಗುಜರಾತ್ ಮೂರು ವಿಕೆಟ್ ಅಂತರದ ಗೆಲುವು ಕಂಡಿದೆ.

Advertisement

ಬುಧವಾರದ ಪಂದ್ಯದಲ್ಲಿ ಗುಜರಾತ್ ನಾಯಕ ಶುಭಮನ್ ಗಿಲ್ ಹಲವು ಕಾರಣಗಳಿಂದ ಮೈದಾನದಲ್ಲಿ ಅತೃಪ್ತರಾಗಿದ್ದರು. ಮೊದಲಿಗೆ, ರಾಜಸ್ಥಾನ್ ರಾಯಲ್ಸ್ ಜೋಡಿ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ದೊಡ್ಡ ಹೊಡೆತಕ್ಕೆ ಹೋದಾಗ ಅವರ ಗುಜರಾತ್ ಟೈಟಾನ್ಸ್ ಬೌಲರ್‌ಗಳು ರನ್ ಸೋರಿಕೆ ಮಾಡಿದರು. ಫೀಲ್ಡರ್ ಗಳು ಹಲವು ಕ್ಯಾಚ್ ಗಳನ್ನೂ ಕೈಚೆಲ್ಲಿದರು. ಮತ್ತೊಂದೆಡೆ ಅಂಪೈರ್‌ ನ ನಿರ್ಧಾರದಿಂದ ಶುಭಮನ್ ಗಿಲ್ ಮೈದಾನದಲ್ಲೇ ಕೋಪಗೊಂಡರು.

ಗುಜರಾತ್ ನ ಮೋಹಿತ್ ಶರ್ಮಾ ಎಸೆದ 17ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಓವರ್‌ ನ ಅಂತಿಮ ಎಸೆತವನ್ನು ವೈಡ್ ನೀಡಲಾಯಿತು ಹೀಗಾಗಿ ಗಿಲ್ ಡಿಆರ್‌ಎಸ್‌ ಮೂಲಕ ಮೂರನೇ ಅಂಪೈರ್ ಮೊರೆ ಹೋದರು. ಆ ಎಸೆತದಲ್ಲಿ, ಬ್ಯಾಟರ್ ಸಂಜು ಸ್ಯಾಮ್ಸನ್ ಆಡಲು ಪ್ರಯತ್ನಿಸುತ್ತಿರುವಾಗ ಸ್ವಲ್ಪ ಹೊರಗೆ ತೆರಳಿದರು. ಥರ್ಡ್ ಅಂಪೈರ್ ಮೊದಲು ವೈಡ್ ಇಲ್ಲ ಎಂದು ಬಳಿಕ ವೈಡ್ ಎಂದು ತೀರ್ಪು ನೀಡಿದರು. ಆ ನಿರ್ಧಾರದಿಂದ ಗಿಲ್ ಕೋಪಗೊಂಡರು. ಅವರು ಅಂಪೈರ್ ವಿನೋದ್ ಶೇಷನ್ ಅವರೊಂದಿಗೆ ಸುದೀರ್ಘ ಅನಿಮೇಟೆಡ್ ಮಾತುಕತೆಯಲ್ಲಿ ತೊಡಗಿದ್ದರು.
Wide Controversy, Gujarat Titans, Shubhman Gill, RRvsGT, Kannada news, IPL 2024

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ಮೂರು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದರೆ, ಗುಜರಾತ್ ತಂಡವು ಕೊನೆಯ ಎಸೆತದಲ್ಲಿ ಗುರಿ ಮುಟ್ಟಿ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next