Advertisement

ಕಡಲ ಒಡಲಿಂದ ತೆಗೆದ ತ್ಯಾಜ್ಯ ಲಕ್ಷ ಕೆ.ಜಿ.!

02:10 AM Jul 02, 2020 | Hari Prasad |

ಸಮುದ್ರ ಸ್ವಚ್ಛಗೊಳಿಸಲೆಂದೇ ಇರುವ ಹಲವು ಹಡಗುಗಳು ಸೇರಿಯೂ ಮಾಡಲಾ­ಗ­ದಂತಹ ಕಾರ್ಯವನ್ನು ಒಂದೇ ಹಡಗು ಮಾಡಿ ತೋರಿಸಿದೆ.

Advertisement

ಅದು ಕಡಲ ಒಡಲಲ್ಲಿ ಬೆರೆತ ಪ್ಲಾಸ್ಟಿಕ್‌ ತೆಗೆಯುವ ಕಾರ್ಯ.

ಆದರೆ ಓಷನ್‌ ವಾಯೇಜಸ್‌ ಸಂಸ್ಥೆಯ ಹಡಗು ಪೆಸಿಫಿಕ್‌ ಸಾಗರದೊಳಗಿಂದ ಹೆಕ್ಕಿ ತೆಗೆದಿರುವುದು ಒಂದೆರಡು ಕೆ.ಜಿ. ಕಸವಲ್ಲ, ಬರೋಬ್ಬರಿ ಒಂದು ಲಕ್ಷ ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ತ್ಯಾಜ್ಯ! ಹಾಗೇ ಇದುವರೆಗೂ ಯಾವೊಂದು ಹಡಗು ಅಥವಾ ತಂಡ ಇಷ್ಟೊಂದು ಪ್ರಮಾಣದ ಕಸ ಹೊರತೆಗೆದ ಉದಾಹರಣೆಗಳಿಲ್ಲ.

ಹೀಗಾಗಿ ಇದೊಂದು ವಿಶ್ವ ದಾಖಲೆ ಕೂಡ ಹೌದು. ಇವೆಲ್ಲವುಗಳ ಜತೆ ಮಾನವನ ನಿರ್ಲಕ್ಷ್ಯದಿಂದಾಗಿ ನಮ್ಮ ಕೆರೆ, ನದಿ, ಸಮುದ್ರ ಸೇರಿ ಎಲ್ಲ ಜಲ ಮೂಲಗಳು ಮಲಿನಗೊಳ್ಳುತ್ತಿರು­ವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.

ಸ್ವಚ್ಛಗೊಳಿಸಿದ್ದು ಯಾರು?
– ಓಷನ್‌ ವಾಯೇಜಸ್‌ ಸಂಸ್ಥೆ ಸಂಸ್ಥಾ­ಪಕಿ ಮೇರಿ ಕ್ರೌಲಿ ಹಾಗೂ ತಂಡ ಈ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.

Advertisement

– 48 ದಿನ ಸಮುದ್ರವೆಲ್ಲ ಸುತ್ತಾಡಿದ ತಂಡ, ಹರಿದ ಬಲೆ, ಜನ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಹೊರ ತೆಗೆದಿದೆ.

– 2019ರಲ್ಲಿ 28 ದಿನ ಸಮುದ್ರ ಸಂಚಾರ ನಡೆಸಿದ್ದ ಇದೇ ತಂಡ 48 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿತ್ತು.

– 100 ಟನ್‌ ವಿಷಕಾರಿ ಪ್ಲಾಸ್ಟಿಕ್‌ ಹೊರ­ತೆಗೆಯುವ ಗುರಿ ಹೊಂದಿದ್ದ ತಂಡ, ನಿರೀಕ್ಷೆ ಮೀರಿ ಕಸ ಸಂಗ್ರಹಿಸಿದೆ.

– ಸಮುದ್ರದಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯ ಇದೆ ಎಂದು ಪತ್ತೆಹಚ್ಚಲು ಜಿಪಿಎಸ್‌ ಆಧಾರಿತ ಟ್ರಾಕಿಂಗ್‌ ವ್ಯವಸ್ಥೆ ಬಳಕೆ.

ಜಲಚರಗಳ ಜೀವಕ್ಕೆ ಮುಳುವು
ಮೀನುಗಾರರು ಸಮುದ್ರಕ್ಕೆಸೆ­ಯುವ ಹರಿದ ಬಲೆಗಳು ಹಾಗೂ ಜನ ಬಳಸಿ ಬಿಸಾಡಿದ ಬಾಟಲಿ ಮತ್ತಿತರ ಪ್ಲಾಸ್ಟಿಕ್‌ ತ್ಯಾಜ್ಯ, ಜಲಚರಗಳ ಜೀವತೆಗೆಯು­ವಷ್ಟು ವಿಷಕಾರಿಯಾಗಿರುತ್ತದೆ. ಅರೆಬರೆ ಬಲೆಗಳಲ್ಲಿ ಮೀನು ಮತ್ತಿತರ ಜೀವಿಗಳು ಸಿಲುಕಿ ಪ್ರಾಣ ಬಿಡುವುದ­ರಿಂದ ಇವುಗಳನ್ನು ತಜ್ಞರು ‘ಗೋಸ್ಟ್‌ ನೆಟ್‌’ ಅಂತಲೇ ಕರೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next