Advertisement

ಸಿಎಎ ವಿರೋಧಿಸಿ ಏಕಾಂಗಿ ಹೋರಾಟ

10:59 PM Dec 21, 2019 | Lakshmi GovindaRaj |

ಸಾಗರ: ಸಿಎಎ ಹಾಗೂ ಎನ್‌ಆರ್‌ಸಿ ಜಾರಿ ವಿರೋ ಧಿಸಿ ಕಲಾವಿದೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಪೂರ್ಣಿಮಾ ಎಲ್‌.ಕೆ. ಅವರು ತಾಳಗುಪ್ಪದ ರಾಷ್ಟ್ರೀಯ ಹೆದ್ದಾರಿ-206ರ ಪಕ್ಕದಲ್ಲಿ ಒಂಟಿಯಾಗಿ ಫಲಕ ಹಿಡಿದು ಕೂತು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಶಾಸನಗಳು ಮೇಲ್ನೋಟಕ್ಕೆ ಅಲ್ಪಸಂಖ್ಯಾತರ ವಿರೋಧಿ ಎಂಬಂತೆ ಬಿಂಬಿತವಾಗಿವೆ. ವಾಸ್ತವವಾಗಿ ಆದಿವಾಸಿಗಳ, ಅಲೆಮಾರಿಗಳ, ದಲಿತರ, ಮಹಿಳೆಯರ ವಿರೋ ಧಿಯೂ ಆಗಿದೆ. ಮುಗ್ಧರಾದ ಈ ಜನರಿಗೆ ತಮಗಿರುವ ಮೂಲಭೂತ ಹಕ್ಕುಗಳೇನು ಎಂಬುದರ ಅರಿವೂ ಇಲ್ಲ.

ಈ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೊಳಿಸುವುದರಿಂದ ಹುಟ್ಟಿ ಬೆಳೆದ ಸ್ಥಳದಲ್ಲಿಯೇ ಅವರು ಪರದೇಶಿಗಳಾಗುವ ಅಪಾಯವಿದೆ. ಸಂವಿಧಾನದ ಆಶಯಕ್ಕೆ ವಿರೋಧಿಯಾದ ಈ ಶಾಸನದ ಕರಾಳತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

ಸ್ಥಳಕ್ಕಾಗಮಿಸಿದ ಪೊಲೀಸ್‌ ಅಧಿಕಾರಿಗಳು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸೂಚಿಸಿ ಎಚ್ಚರಿಕೆ ನೀಡಿದರು. ನಂತರ, ಪೂರ್ಣಿಮಾ ತಮ್ಮ ಹೋರಾಟವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next