Advertisement

ಭಾವಪರವಶಗೊಳಿಸಿದ ಬಾಲೆಯರ ಗಾಯನ 

06:00 AM Jun 15, 2018 | |

ಸುರತ್ಕಲ್‌ನ ಫ್ಲೈಓವರ್‌ನ ತಳಭಾಗವನ್ನು ಅತ್ಯಂತ ವರ್ಣರಂಜಿತವಾಗಿ ಸುಂದರಗೊಳಿಸುವಲ್ಲಿ ಮುಖ್ಯ ಕಾರಣರಾದ ನಾಗರಿಕಾ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳು ಪ್ರತಿ ತಿಂಗಳ ಮೊದಲ ಭಾನುವಾರ ಬೆಳಗ್ಗೆ 6.00ರಿಂದ 7ರ ತನಕ ನಡೆಸಿಕೊಂಡು ಬರುತ್ತಿರುವ ಉದಯರಾಗ ಸರಣಿ ಸಂಗೀತ ಕಛೇರಿಗಳ 3ನೇ ಕಾರ್ಯಕ್ರಮ ಕು| ಧನಶ್ರೀ ಶಬರಾಯ, ಕು| ಸುಮೇಧಾ ಕೆ. ಎನ್‌., ಕು| ವರ್ಷಾ ಹಾಗೂ ಕು| ವಸುಮತಿ ಇವರ ಹಾಡುಗಾರಿಕೆಯೊಂದಿಗೆ ನಡೆಯಿತು. ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್‌ ಅವರು ಇತ್ತೀಚೆಗೆ ನಡೆಸಿದ ಸಂಗೀತ ಕಾರ್ಯಾಗಾರದಲ್ಲಿ ಕಲಿಸಿದ ಕೃತಿಗಳನ್ನಾಧರಿಸಿ ನಡೆದ ಈ ಕಾರ್ಯಕ್ರಮದಲ್ಲಿ ಪಾಪನಾಸಂ ಸಿವನ್‌, ಶ್ರೀರಂಜನಿ ರಾಗದ ಗಜವದನ, ಮುತ್ತಯ್ಯ ಭಾಗವತರ ಮೋಹನ ಕಲ್ಯಾಣಿಯ ಭುವನೇಶ್ವರಿಯ, ತ್ಯಾಗರಾಜರ ರಂಜನಿ ರಾಗದ ದುರ್ಮಾಗಚರಾ, ಪುರಂದರದಾಸರ ಜನಸಮ್ಮೊಹಿನಿ ರಾಗದ ಗೋವಿಂದ ನಿನ್ನ, ತ್ಯಾಗರಾಜರ ಮಧ್ಯಮಾವತಿಯ ರಾಮಕಥಾ, ಸದಾಶಿವ ಬ್ರಹೆದ್ರ ಅವರ ಸಾಮರಾಗದ ಮಾನಸ ಸಂಚರರೇ, ಪುರಂದದಾಸರ ಮೋಹನ ರಾಗದ ನಾನೇನು ಮಾಡಿದೆನೋ, ಅಭೇರಿ ರಾಗದಲ್ಲಿ ಅಂಬಿಗ ನಾನಿನ್ನ ಹಾಗೂ ಮಧ್ಯಮಾತಿಯ ಭಾಗ್ಯದ ಲಕ್ಷೀ ಸುಶ್ರಾವ್ಯವಾಗಿ ಪ್ರಸ್ತುತಗೊಂಡವು. ಅನಾಮಧೇಯ ಕವಿಯಿಂದ ರಚಿತವಾದ ಶಿವರಂಜನಿ ರಾಗದ ಚಿಂತ್ಯಾಕೆ ಮಾಡಿತ್ತಿದ್ದಿ ಚಿನ್ಮುಯನಿದ್ದಾನೆ… ಭಜನೆ ಹಾಡು ಶೋತೃಗಳನ್ನು ಭಾವಪರವಶರನ್ನಾಗಿಸಿತು. ಮಾ| ಸುಮೇಧಾ ಅಮೈ ವಯಲಿನ್‌ನಲ್ಲಿ ಹಾಗೂ ಸುಮುಖ ಕಾರಂತ ಮೃದಂಗದಲ್ಲಿ ಸಹಕರಿಸಿದರು. ಕು| ಶೋಭಿತಾ, ಕು| ಸ್ವಾತಿ ಮತ್ತು ಕು| ಆಶ್ವಿ‌ಜಾ ಸಹಗಾಯನದಲ್ಲಿ ಸಹಕರಿಸಿದರು. 

Advertisement

 ಪಿ. ನಿತ್ಯಾನಂದ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next