Advertisement

Divorce ರೇಮಂಡ್‌ ಮಾಲೀಕನ ಶೇ.75 ಆಸ್ತಿಗೆ ಪತ್ನಿ ಬೇಡಿಕೆ

08:59 PM Nov 20, 2023 | Team Udayavani |

ನವದೆಹಲಿ: ಖ್ಯಾತ ಉದ್ಯಮಿ, ರೇಮಂಡ್‌ ಸಂಸ್ಥೆಯ ಮಾಲೀಕ ಗೌತಮ್‌ ಸಿಂಘಾನಿಯ ಅವರ ವಿಚ್ಛೇದಿತ ಪತ್ನಿ ನವಾಜ್‌ ಮೋದಿ ಸಿಂಘಾನಿಯಾ ಅವರು ತಮ್ಮ ಪತಿಯಿಂದ ವಿಚ್ಛೇದನ ಇತ್ಯರ್ಥದ ಭಾಗವಾಗಿ 1.4 ಶತಕೋಟಿ ಡಾಲರ್‌ ಮೌಲ್ಯದ ಆಸ್ತಿಗೆ ಬೇಡಿಕೆ ಇಟ್ಟಿದ್ದಾರೆ.

Advertisement

ಇದು ಗೌತಮ್‌ ಅವರ ಆಸ್ತಿಯ ಶೇ.75 ಭಾಗದಷ್ಟಾಗಿದೆ ಎಂದು ಎಕಾನಮಿಕ್‌ ಟೈಮ್ಸ್‌ ವರದಿ ಮಾಡಿದೆ. ಸಿಂಘಾನಿಯಾ ಅವರ ಇಬ್ಬರು ಪುತ್ರಿಯರಾದ ನಿಹಾರಿಕಾ ಹಾಗೂ ನಿಸಾ ಅವರ ಭವಿಷ್ಯವನ್ನು ಭದ್ರಪಡಿಸುವ ಗುರಿಯೊಂದಿಗೆ ಶೇ.75ರಷ್ಟು ನಿವ್ವಳ ಆಸ್ತಿಗೆ ಬೇಡಿಕೆ ಇಟ್ಟಿರುವುದಾಗಿ ನವಾಜ್‌ ಹೇಳಿದ್ದಾರೆ.

ಇದು ಈಗಾಗಲೇ ಕುಟುಂಬದ ಸಂಪತ್ತಿನ ಭವಿಷ್ಯದ ಹಂಚಿಕೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಪತ್ನಿಯ ಬೇಡಿಕೆಯಂತೆ ಆಸ್ತಿ ನೀಡಲು ಗೌತಮ್‌ ಪರಿಗಣಿಸುತ್ತಿದ್ದು ಕುಟುಂಬದ ಆಸ್ತಿ ನಿರ್ವಹಣೆ ಮತ್ತು ವರ್ಗಾವಣೆಗೆ ಟ್ರಸ್ಟ್‌ ಒಂದನ್ನು ಸ್ಥಾಪಿಸಲು ಯೋಜಿಸಿದ್ದಾರೆ ಎಂದೂ ತಿಳಿದುಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next