Advertisement
ಎಸ್ ಪಿಎಲ್23ರ ಆಯೋಜನೆ ಕಳೆದ ನವೆಂಬರಿನಿಂದ ನಡೆದಿದ್ದು, ರಾಜ್ಯದೆಲ್ಲೆಡೆಯಿಂದ ಒಟ್ಟು 453 ಸ್ಪರ್ಧಿಗಳು ಮೊದಲ ಹಾಗೂ ಮೆಗಾ ಅಡಿಷನ್‌ನಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಒಟ್ಟು 72 ಸ್ಪರ್ಧಿಗಳು ಆಯ್ಕೆಯಾಗಿದ್ದು, 9 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸ್ಪರ್ಧಿಸಲಿವೆ.
Related Articles
Advertisement
ಜೂನ್ 1ರ ಸಂಜೆ 4 ರಿಂದ 9 ಗಂಟೆಯವರೆಗೆ, ವಾಣಿ ಹರಿಕೃಷ್ಣ ಉಪಸ್ಥಿತಿಯೊಂದಿಗೆ, ರಮೇಶ್ಚಂದ್ರ ಸಾರಥ್ಯದಲ್ಲಿ, ಎಸ್ಪಿಎಲ್ ಟೀಂ ಲೀಡರ್‌ಗಳಾಗಿರುವ ಪಂಚಮ್ ಹಳೆಬಂಡಿ, ಪ್ರತಿಮಾ ಭಟ್, ಸುರೇಖಾ ಹೆಗ್ಡೆ, ರಾಧಿಕಾ ಕಲ್ಲೂರಾಯ, ರಶ್ಮಿ ಚಿಕ್ಕಮಗಳೂರು, ಶ್ರೀಕೃಪಾ, ಶಶಿಕಿರಣ್, ರವೀಂದ್ರ ಪ್ರಭು ಹಾಗೂ ಮಿಥುನ್ ವಿದ್ಯಾಪುರ ಇವರ ಸಮ್ಮಿಲನದೊಂದಿಗೆ, ವಿಜೇತ ತಂಡಗಳ ಸಮಾಗಮದೊಂದಿಗೆ ಕಣ್ಮನ ಸೆಳೆಯುವ ‘ಪಂಚಭಾಷಾ ರಸಮಂಜರಿ’ ಜರುಗಲಿದೆ.
ಈ ಸಂದರ್ಭದಲ್ಲಿ ಕಲಾ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರಿಗೆ ಕಲಾವೀರ ತಿಲಕರತ್ನ ಗೌರವ ಪ್ರಶಸ್ತಿ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಭೀಷ್ಮ ಖ್ಯಾತಿಯ ಮನೋಹರ್ ಪ್ರಸಾದ್ ಅವರಿಗೆ ಸಕಲ ಕಲಾಸಂಪನ್ನ ಗೌರವ ಪ್ರಶಸ್ತಿ, ಸಂಗೀತ ಕ್ಷೇತ್ರದಲ್ಲಿನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಠಾಗೋರ್ ದಾಸ್ ಮತ್ತು ಶಾರದಾ ಬಾರ್ಕೂರ್ ಅವರಿಗೆ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಕಲಾ ಸಾಧಕ ಪ್ರಶಸ್ತಿ, ವಿಶೇಷ ಚೇತನ ಕಲಾ ಸಾಧಕ ಪ್ರಶಸ್ತಿ, ಗೌರವ ಕ್ರೀಡಾ ಸಾಧಕ ಪ್ರಶಸ್ತಿ, ಗೌರವ ಸಮಾಜಸೇವಾ ರತ್ನ ಪ್ರಶಸ್ತಿ ಹಾಗೂ ಗೌರವ ಕಲಾಪೋಷಕ ರತ್ನ ಪ್ರಶಸ್ತಿ ನೀಡಲಾಗುವುದು.
ಪ್ರಶಸ್ತಿ ಪ್ರದಾನ, ಬಹುಮಾನ ವಿತರಣೆ ಜೊತೆಗಿನ ರಸಮಂಜರಿ ಕಾರ್ಯಕ್ರಮದ ನೇರಪ್ರಸಾರವನ್ನು ವಿ4 ವಾಹಿನಿ ಹಾಗೂ ಇತರ ಸಹಭಾಗಿ ಯುಟ್ಯೂಬ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಎರಡು ದಿನದ ಸ್ಪರ್ಧೆಯನ್ನು ಕಂತುಗಳಾಗಿ ವಿ4 ವಾಹಿನಿ ಹಾಗೂ ಸಹಯೋಗಿ ಯುಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗಿ ಉಳಿದ ಹಣದಲ್ಲಿ ವಿಶೇಷ ಚೇತನ ಮಕ್ಕಳಿಗೆ ಹಾಗೂ ಸಂಸ್ಥೆಗಳಿಗೆ ಸಹಾಯ ಹಾಗೂ ಹಿರಿಯ ಕಲಾವಿದರಿಗೆ ಮಾಸಾಶನ ವ್ಯವಸ್ಥೆಯನ್ನು ಮಾಡಲಾಗುವುದು. ಅರುಣ್ಯ ಫೌಂಡೇಶನ್ ಕೃಷಿ, ಗ್ರಾಮೀಣಾಭಿವೃದ್ಧಿ, ಯುವಸಬಲೀಕರಣ, ಕಲೆ, ಸಂಸ್ಕೃತಿ, ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದು, ಕಳೆದ 5 ವರ್ಷಗಳಿಂದ ಸಕ್ರೀಯವಾಗಿದೆ. ದಾಸ್ ಕುಡ್ಲ ಇವೆಂಟ್ಸ್ ರಾಜ್ಯದ ಸಂಗೀತ ಕಲಾವಿದರಿಗೆ ಪ್ರೊತ್ಸಾಹ, ಹಾಗೂ ವೇದಿಕೆಯನ್ನು ನೀಡುತ್ತಿದೆ. ಸುರ್‌ಸಂಗಮ್ ಆರ್ಕೆಸ್ಟ್ರಾ ಮೂಲಕ ಮಂಗಳೂರು ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಸತತವಾಗಿ ಆರು ವರ್ಷಗಳ ಕಾಲ ಆಯೋಜಿಸಿರುವುದು, ಕರಾವಳಿಯ ಸಂಗೀತ ಪ್ರಿಯರ ಮನಸ್ಸಿನಲ್ಲಿ ಗಾಢವಾದ ಛಾಪು ಮೂಡಿಸಿದೆ.