ರಾಯಚೂರು: ತೆಲುಗು ಬುಕ್ ಆಫ್ ರೆಕಾರ್ಡ್ ಸೇರಿ 9 ವಿವಿಧ ದಾಖಲೆಗಳ ನಿರ್ಮಾಣಕ್ಕಾಗಿ ಮಂತ್ರಾಲಯದಲ್ಲಿ ಭಾನುವಾರ 2,500 ಗಾಯಕರಿಂದ ಏಕಕಾಲಕ್ಕೆ ಆಂಜನೇಯ ಸ್ವಾಮಿಯ 108 ಕೀರ್ತನೆಗಳ ಗಾಯನ ಜರುಗಲಿದೆ.
ಮಂತ್ರಾಲಯ ಆಡಳಿತ ಮಂಡಳಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಠದ ವಿದ್ಯಾಪೀಠದ ಪ್ರಾಚಾರ್ಯ ಡಾ| ವಾದಿರಾಜಾಚಾರ್ಯ ಈ ಬಗ್ಗೆ ಮಾಹಿತಿ ನೀಡಿದರು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಐದನೇ ಚಾತುರ್ಮಾಸ್ಯ ನಿಮಿತ್ತ ವಿವಿಧ ಭಜನಾ ಮಂಡಳಿಗಳಿಂದ ಭಾನುವಾರ ಕಾರ್ಯಕ್ರಮ ಜರುಗಲಿದೆ.
ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಕಾರ್ಯಕ್ರಮ ಆಯೋಜಿಸಿದ್ದು, ಸತತ ಆರು ಗಂಟೆ ಹರಿದಾಸರ 108 ಆಂಜನೇಯ ಕೀರ್ತನೆಗಳ ಗಾಯನ ಜರುಗಲಿದೆ.
ತೆಲುಗು ಬುಕ್ ಆಫ್ ರೆಕಾರ್ಡ್, ಇಂಡಿಯನ್ ಟ್ಯಾಲೆಂಟ್ ಆರ್ಗನೈಸೇಷನ್ ರೆಕಾರ್ಡ್, ವಂಡರ್ ಬುಕ್ ಆಫ್ ರೆಕಾರ್ಡ್, ವರ್ಲ್ ರೆಕಾರ್ಡ್ ಇಂಡಿಯಾ, ಜೀನಿಯಸ್ ಬುಕ್ ಆಫ್ ರೆಕಾರ್ಡ್, ಮಿರಾಕಲ್ ವರ್ಲ್ಡ್ ರೆಕಾರ್ಡ್, ವರ್ಲ್ಡ್ ಬುಕ್ ಆಫ್ ಇಂಡಿಯಾ, ಗೋಲ್ಡ್‌ನ ಸ್ಟಾರ್ ರೆಕಾರ್ಡ್, ಹೈರೇಂಜ್ ಬುಕ್ ಆಫ್ ರೆಕಾರ್ಡ್, ಮಾರ್ಬಲೆಸ್ ರೆಕಾರ್ಡ್ ಸೇರಿ ಒಟ್ಟು 9 ದಾಖಲೆ ನಿರ್ಮಿಸಲು ಸಿದಟಛಿತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸೇರಿ ಒಡಿಶಾ, ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ವಿವಿಧ ಭಜನಾ ಮಂಡಳಿಗಳ 2,500 ಸದಸ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಭಜನಾ ಮಂಡಳಿಗಳ ಸದಸ್ಯರಿಗೂ ವಸತಿ, ಊಟ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡ ಭಾಷೆ ಬಾರದವರಿಗೆ ತರಬೇತಿ ನೀಡಿದ್ದು, ಅವರೂ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಠದ ಗುರುಸಾರ್ವಭೌಮ ದಾಸ ಸಾಹಿತ್ಯದ ವಿಶೇಷಾ ಧಿಕಾರಿ ಅಪ್ಪಣ್ಣಾಚಾರ್ಯ ಕೌತಾಳಂ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದರು.
ಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್, ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷ ಅ ಧಿಕಾರಿ ಅಪ್ಪಣ್ಣಾಚಾರ್ಯ, ನಾರಾಯಣದಾಸ,ಗುರುರಾಜ, ಸುಳಾದಿ ಹನುಮೇಶಾಚಾರ್ಯ ಇತರರಿದ್ದರು.
ಮಂತ್ರಾಲಯದ ರಾಯರ ಮಠದಲ್ಲಿ ಭಾನುವಾರ ವಿದ್ವಾಂಸರ ಸಮಾವೇಶ ಆಯೋಜಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳ 300ಕ್ಕೂ ಹೆಚ್ಚು ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಧರ್ಮ ಪ್ರಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಮಠದ ಪ್ರಗತಿ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು.
– ಶ್ರೀ ಸುಬುಧೇಂದ್ರ ತೀರ್ಥರು, ಮಠದ
ಪೀಠಾಧಿಪತಿ, ಮಂತ್ರಾಲಯ