Advertisement

ಲೈಂಗಿಕ ಕಿರುಕುಳದ ಸುಳಿಯಲ್ಲಿ ಪಪೊನ್‌

03:18 PM Feb 24, 2018 | Sharanya Alva |

ನವದೆಹಲಿ:ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಿಯಾಲಿಟಿ ಶೋ ಒಂದರ ಆಡಿಷನ್‌ ವೇಳೆ ಕಾರ್ಯಕ್ರಮದ ಪ್ರತಿನಿಧಿಯೊಬ್ಬರು ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದು ರಿಯಾಲಿಟಿ ಶೋಗಳ ಮತ್ತೂಂದು ರಿಯಲ್‌ ಮುಖವನ್ನು ಪರಿಚಯಿಸಿತ್ತು. ಈ ಘಟನೆಯ ನೆನಪು ಮಾಸುವ ಮುನ್ನವೇ, ಹಿಂದಿಯ ಗಾಯನಕ್ಕೆ ಸಂಬಂಧಿಸಿದ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವ ಗಾಯಕ ಹಾಗೂ ಸಂಗೀತಗಾರ ಪಪೊನ್‌ ವಿರುದ್ಧ, ಇದೀಗ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ರಿಯಾಲಿಟಿ ಶೋಗಳ ಬಗೆಗಿನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌ ವಕೀಲರಾದ ಋಣಾ ಬುಯಾನ್‌ ಎಂಬುವರು ಫೋಕ್ಸೋ ಅಡಿಯಲ್ಲಿ ದೂರು  ದಾಖಲಿಸಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿರುವ ಬಾಲಕಿಯ ತಂದೆ, “”ನನ್ನ ಮಗಳಿಗೆ ಪಪೊನ್‌ ಮಾರ್ಗದರ್ಶಕ. ಅವರು ತಪ್ಪಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಇಲ್ಲಿಗೇ ಬಿಟ್ಟುಬಿಡಿ” ಎಂದು ಮಾಧ್ಯಮಗಳನ್ನು ಕೋರಿದ್ದಾರೆ.

ಏನಾಗಿತ್ತು?ಕಾರ್ಯಕ್ರಮದ ಸ್ಪರ್ಧಾಳುಗಳಿಗಾಗಿ ಅನೌಪಚಾರಿಕ ಹೋಳಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಪೋನ್‌ ಎಲ್ಲರಿಗೂ ರಂಗು ಎರಚುತ್ತಾ ಬಂದು, ಆ ಬಾಲಕಿಗೂ ರಂಗು ಎರಚಿದ್ದಾರೆ. ಜತೆಗೆ ಆಕೆಯನ್ನು ಚುಂಬಿಸಿದ್ದಾರೆ.

ಯಾರು ಈ ಗಾಯಕ?
ಇವರ ಮೂಲ ಹೆಸರು ಅಂಗರಾಗ್‌ ಮಹಾಂತಾ. ಅಸ್ಸಾಂನ ನಗಾಂವ್‌ನ ಇವರು, “ಫೋಕ್‌-ಫ್ಯೂಷನ್‌’ ಶೈಲಿಯ ಸಂಗೀತದ ಟ್ರೆಂಡ್‌ ಹುಟ್ಟುಹಾಕಿದವರು. ಇವರು ಕಟ್ಟಿದ ಬ್ಯಾಂಡ್‌ ಹೆಸರು ಪಪೊನ್‌. ಹಾಗಾಗಿ, ಇವರಿಗೆ ಪಪೋನ್‌ ಎಂಬ ಅಡ್ಡ ಹೆಸರು ಬಂದಿದೆ. ಅಸ್ಸಾಮಿ, ಪಂಜಾಬಿ, ತಮಿಳು, ಮರಾಠಿ ಹಾಗೂ ಬಂಗಾಳಿ ಭಾಷೆಗಳ ಸಿನಿಮಾಗಳಲ್ಲಿ ಹಾಡಿದ ನಂತರ ಬಾಲಿವುಡ್‌ನ‌ಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಹಾಡಿದ ಬಾಲಿವುಡ್‌ ಚಿತ್ರಗಳಲ್ಲಿ ಬರ್ಫಿ, ಬೇಫೀಕರ್‌, ರಾಝ್: ರೀಬೂಟ್‌, ಟ್ಯೂಬ್‌ಲೈಟ್‌, ಸುಲ್ತಾನ್‌, ಬೇಬಿ, ಭಜರಂಗಿ ಭಾಯಿಜಾನ್‌ ಸಿನಿಮಾಗಳು ಪ್ರಮುಖವಾದವು.

Advertisement

Udayavani is now on Telegram. Click here to join our channel and stay updated with the latest news.

Next