Advertisement

ಗಾಯಕ ಅಜೀಜ್‌ ಇನ್ನಿಲ್ಲ

10:03 AM Nov 28, 2018 | Harsha Rao |

ಮುಂಬಯಿ: ಹಿಂದಿ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕ ಮೊಹಮ್ಮದ್‌ ಅಜೀಜ್‌ (64) ಮಂಗಳವಾರ ನಿಧನರಾದರು. ಹೃದಯಾಘಾತದಿಂದ ಅವರು ಅಸುನೀಗಿದ್ದಾರೆ. ಅಜೀಜ್‌ ಹಿಂದಿ, ಬಂಗಾಳಿ, ಒಡಿಯಾ ಭಾಷೆಗಳ 20,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಟರಾದ ಅಮಿತಾಭ್‌ ಬಚ್ಚನ್‌, ರಿಶಿ ಕಪೂರ್‌, ಗೋವಿಂದ, ಮಿಥುನ್‌ ಚಕ್ರವರ್ತಿ ಮುಂತಾದ ನಾಯಕ ನಟರಿಗೆ ಹಿನ್ನೆಲೆ ಗಾಯನ ನೀಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. “ಮೈ ನೇಮ್‌ ಈಸ್‌ ಲಖನ್‌’, “ಆಪ್‌ ಕೇ ಆ ಜಾನೇ ಸೆ’, “ದಿಲ್‌ ಲೇ ಗಯಿ ತೇರಿ ಬಿಂದಿಯಾ’ದಂಥ ಎವರ್‌ಗ್ರೀನ್‌ ಹಾಡುಗಳನ್ನು ಅಜೀಜ್‌ ಹಾಡಿದ್ದು, ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next