ಕುವೈತ್: ಕತಾರ್ ನ ಐಶಾರಾಮಿ ಮಳಿಗೆಯಲ್ಲಿ ಡಾಲರ್ ನಂತೆ ಭಾರತೀಯ ಕರೆನ್ಸಿ ಬಳಸಿ ಶಾಪಿಂಗ್ ಮಾಡಿರುವುದಾಗಿ ಹಾಡುಗಾರ ಮಿಕಾ ಸಿಂಗ್ ಟ್ವೀಟ್ ಮಾಡಿದ್ದು, ಡಾಲರ್ ನಂತೆ ನಮ್ಮ ಭಾರತೀಯ ಹಣವನ್ನು ಬಳಸಿ ಶಾಪಿಂಗ್ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿಗೆ ಸೆಲ್ಯೂಟ್ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ
ಕತಾರ್ ವಿಮಾನ ನಿಲ್ದಾಣದಲ್ಲಿ ಡಾಲರ್ ನಂತೆ ರೂಪಾಯಿ ಬಳಸಿ ಶಾಪಿಂಗ್ ಮಾಡಿರುವ ವಿಚಾರದ ಬಗ್ಗೆ ಮಿಕಾ ಸಿಂಗ್ ಟ್ವೀಟ್ ಮಾಡಿದ್ದು, ಇದಕ್ಕೆ ಸಾವಿರಾರು ಬಳಕೆದಾರರು ಲೈಕ್ಸ್ ಮಾಡಿದ್ದು, ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದನ್ನು ಸ್ವಾಗತಿಸಿದ್ದಾರೆ.
“ಶುಭೋದಯ, ನನಗೆ ದೋಹಾ ವಿಮಾನ ನಿಲ್ದಾಣದಲ್ಲಿನ@LouisVuitton ಮಾಲ್ ನಲ್ಲಿ ಶಾಪಿಂಗ್ ಮಾಡುವಾಗ ಭಾರತೀಯ ರೂಪಾಯಿಗಳನ್ನು ಬಳಸಲು ತುಂಬಾ ಹೆಮ್ಮೆ ಎನಿಸಿರುವುದಾಗಿ” ಮಿಕಾ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದರು.
ಕುವೈತ್ ನ ಶಾಪಿಂಗ್ ಮಾಲ್ ಮಾತ್ರವಲ್ಲ, ಯಾವುದೇ ರೆಸ್ಟೋರೆಂಟ್ ನಲ್ಲಿಯೂ ಕೂಡಾ ರೂಪಾಯಿಯನ್ನು ಬಳಸಬಹುದಾಗಿದೆ..ಇದು ಅದ್ಭುತವಾದ ವಿಷಯವಲ್ಲವೇ? ನಮ್ಮ ಹಣವನ್ನು ಡಾಲರ್ ನಂತೆ ಬಳಸಲು ಅನುವು ಮಾಡಿಕೊಟ್ಟ@PMNarendramodi ಸಾಬ್ ಗೆ ಧನ್ಯವಾದಗಳು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಸಿಂಗ್ ಟ್ವೀಟ್ ಗೆ ಹಲವು ಬಳಕೆದಾರರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಭಾರತೀಯ ಕರೆನ್ಸಿ ಇನ್ನಷ್ಟು ಬಲಿಷ್ಠವಾಗಿದೆ ಎಂದು ಟ್ವೀಟ್ ಬಳಕೆದಾರರೊಬ್ಬರು ತಿಳಿಸಿದ್ದು, ಇದು ನವ ಭಾರತದ ಶಕ್ತಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.