Advertisement

ಕನ್ನಡ ಚಿತ್ರಕ್ಕೆ ನಾಯಕಿಯಾದ ಗಾಯಕಿ ಮಂಗ್ಲಿ

10:11 AM Jan 11, 2023 | Team Udayavani |

ಗಾಯಕಿ ಮಂಗ್ಲಿ ಈಗ ನಾಯಕಿಯಾಗಿ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ನಾಗಶೇಖರ್‌ ನಾಯಕರಾಗಿರುವ “ಪಾದರಾಯ’ ಚಿತ್ರದಲ್ಲಿ ಮಂಗ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಚಕ್ರವರ್ತಿ ಚಂದ್ರಚೂಡ್‌ ನಿರ್ದೇಶಿಸುತ್ತಿದ್ದಾರೆ.

Advertisement

ತಮ್ಮ ಗಾಯನದ ಮೂಲಕ ಕನ್ನಡಿಗರ ಮನಗೆದ್ದಿರುವ ಮಂಗ್ಲಿ ಈಗ ಕನ್ನಡ ಚಿತ್ರದ ಮೂಲಕವೇ ನಾಯಕಿಯಾಗುತ್ತಿದ್ದಾರೆ. “ಪಾದರಾಯ’ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು, ಯುನಿವರ್ಸಲ್‌ ಸಬ್ಜೆಕ್ಟ್ ಆಗಿರುವುದರಿಂದ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ.

ಇದನ್ನೂ ಓದಿ:ಲಂಕಾ ಏಕದಿನ: ರನ್ ಮೇಲಾಟದಲ್ಲಿ ಹೃದಯ ಗೆದ್ದ ರೋಹಿತ್; ವಿಡಿಯೋ

ಸಿದ್ದೇಶ್ವರ ಎಂಟಪ್ರೈಸಸ್‌ ಬ್ಯಾನರ್‌ನಡಿ ಆರ್‌.ಚಂದ್ರು “ಪಾದರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಾಗಶೇಖರ್‌ ಸಹ ನಿರ್ಮಾಣವಿದೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ, ಆಂಟೋನಿ ಸಂಕಲನ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next