ಚೆನ್ನೈ: ಬಾಲಿವುಡ್ ಖ್ಯಾತ ಗಾಯಕ ಬೆನ್ನಿ ದಯಾಳ್ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಗಾಯಗೊಂಡಿದ್ದಾರೆ.
ಚೆನ್ನೈನಲ್ಲಿ ಇತ್ತೀಚೆಗೆ ಸಂಗೀತ ಕಾರ್ಯಕ್ರಮವೊಂದನ್ನು ನೀಡುತ್ತಿದ್ದರು. ತನ್ನ ಹಾಡಿನ ಮೂಲಕ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದ್ದಾರೆ. ಬೆನ್ನಿ ಅವರ ಹಾಡನ್ನು ಕೇಳುತ್ತಾ ಮ್ಯೂಸಿಕಲ್ ನೈಟ್ ನಲ್ಲಿ ಮುಳುಗಿದ್ದ ವೀಕ್ಷಕರು ಅನಿರೀಕ್ಷಿತ ಘಟನೆಯೊಂದನ್ನು ಶಾಕ್ ಆಗಿದ್ದಾರೆ.
ವೇದಿಕೆಯಲ್ಲಿ ಹಾಡುತ್ತಿದ್ದ ಬೆನ್ನಿ ದಯಾಳ್ ಅವರ ಕ್ಷಣವನ್ನು ಸೆರೆ ಹಿಡಿಯಲು ಆಯೋಜಕರು ಡ್ರೋಣ್ ಬಳಸಿದ್ದಾರೆ. ಡ್ರೋಣ್ ಬೆನ್ನಿ ಅವರ ಹತ್ತಿರ ಬರುವಾಗ ಗಾಯಕನ ತಲೆಗೆ ಬಡಿದಿದೆ. ಪರಿಣಾಮ ಡ್ರೋಣ್ ರೆಕ್ಕೆಗಳಿಂದ ಬೆನ್ನಿ ಅವರ ತಲೆಗೆ ಏಟಾಗಿ ಅಲ್ಲೇ ಕುಸಿದು ಕೂತಿದ್ದಾರೆ. ಗಾಯಗೊಂಡ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಬೆನ್ನಿ ದಯಾಳ್ ಅವರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ ಕಾರ್ಯಕ್ರಮ ಆಗುವ ವೇಳೆ ಆಯೋಜಕರು ಡ್ರೋಣ್ ನ್ನು ಕಲಾವಿದರ ಪಕ್ಕ ತರಬಾರದು. ನಾವೇನು ಸ್ಟಾರ್ಸ್ ಗಳಂತೆ ಸ್ಟಂಟ್ ಮಾಡಲು ವೇದಿಕೆ ಹತ್ತೋದಲ್ಲ. ದಯವಿಟ್ಟು ಆಯೋಜಕರು ಡ್ರೋಣ್ ಬಳಸುವಾಗ ಜಾಗ್ರತೆ ವಹಿಸಬೇಕೆಂದು ಹೇಳಿದ್ದಾರೆ.