Advertisement

ಸಿಂಗಾಪುರ್‌ ಸ್ಮ್ಯಾಶ್‌ ಟೇಬಲ್‌ ಟೆನಿಸ್‌: ಭಾರತದ ಆಟ ಅಂತ್ಯ

04:58 PM Mar 15, 2023 | Team Udayavani |

ಸಿಂಗಾಪುರ: “ಸಿಂಗಾಪುರ್‌ ಸ್ಮ್ಯಾಶ್‌ ಟೇಬಲ್‌ ಟೆನಿಸ್‌’ ಪಂದ್ಯಾವಳಿಯಲ್ಲಿ ಭಾರತದ ಆಟ ಕೊನೆಗೊಂಡಿದೆ. ಮಣಿಕಾ ಬಾತ್ರಾ ವನಿತಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಸೋಲುವುದರೊಂದಿಗೆ ಭಾರತ ಕೂಟದಿಂದ ನಿರ್ಗಮಿಸಿತು.

Advertisement

ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಕಾ ಬಾತ್ರಾ-ಜಿ. ಸಥಿಯನ್‌ ಜಪಾನ್‌ನ ಹಿನಾ ಹಯಾಟಾ-ಟೊಮೊಕಾಝ ಹರಿಮೊಟೊ ವಿರುದ್ಧ 2-3 ಅಂತರದ ಸೋಲನುಭವಿಸಿದರು (9-11, 9-11, 11-8, 11-5, 7-11). ಜಪಾನ್‌ ಜೋಡಿ ಹಾಲಿ ವಿಶ್ವ ಚಾಂಪಿಯನ್‌ಶಿಪ್‌ ರನ್ನರ್ ಅಪ್‌ ಆಗಿದೆ.

ಭಾರತೀಯ ಜೋಡಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. 16ರ ಸುತ್ತಿನಲ್ಲಿ ಸಿಂಗಾಪುರ್‌ ಜೋಡಿಯನ್ನು ಮಣಿಸಿತ್ತು.
ವನಿತಾ ಡಬಲ್ಸ್‌ನಲ್ಲಿ ಮಣಿಕಾ ಬಾತ್ರಾ-ಅರ್ಚನಾ ಕಾಮತ್‌ ಅವರನ್ನು ಚೀನದ ಮೆಂಗ್‌ ಚೆನ್‌-ಯಿದಿ ವಾಂಗ್‌ 3-2ರಿಂದ ಮಣಿಸಿತು.

ಮಣಿಕಾ ಬಾತ್ರಾ, ಜಿ. ಸಥಿಯನ್‌ ಮತ್ತು ಅಚಂತ ಶರತ್‌ ಕಮಲ್‌ ಸಿಂಗಲ್ಸ್‌ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next