Advertisement

Olympics: ಪ್ಯಾರಿಸ್‌ನಲ್ಲೂ ಅಮೆರಿಕ ಪ್ರಭುತ್ವ?

11:58 PM Jul 23, 2024 | Team Udayavani |

ಪ್ಯಾರಿಸ್‌:  ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸುವ ದೇಶ ಯಾವುದಿರ ಬಹುದು? ಕುತೂಹಲ ಸಹಜ. ಸಮೀ ಕ್ಷೆಯೊಂದರ ಪ್ರಕಾರ ಅಮೆರಿಕಕ್ಕೆ ಈ ಪಟ್ಟ ಲಭಿಸಲಿದೆ. ಚೀನವೂ ರೇಸ್‌ನಲ್ಲಿದೆ.

Advertisement

ಸಮೀಕ್ಷೆ ಪ್ರಕಾರ ಅಮೆರಿಕ 112 ಪದಕಗಳನ್ನು ಗೆಲ್ಲುವ ಸಾಧ್ಯತೆ ಇದೆ-39 ಚಿನ್ನ, 32 ಬೆಳ್ಳಿ ಮತ್ತು 41 ಕಂಚು. ಚೀನಕ್ಕೆ 86 ಪದಕಗಳು ಒಲಿಯಬಹುದು-34 ಚಿನ್ನ, 27 ಬೆಳ್ಳಿ ಹಾಗೂ 25 ಕಂಚು. “ನೀಲ್‌ಸನ್ಸ್‌ ಗ್ರೇಸ್‌ನೋಟ್‌ ಇ ನ್ಪೋರ್ಟ್ಸ್’
ಈ ಸಮೀಕ್ಷೆ ನಡೆಸಿದೆ.

2020ರ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅಮೆರಿಕ ನಂ.1 ಹಾಗೂ ಚೀನ ನಂ.2 ಸ್ಥಾನದಲ್ಲಿದ್ದವು. ಪ್ಯಾರಿಸ್‌ನಲ್ಲೂ ಅಮೆರಿಕ ಟೇಬಲ್‌ ಟಾಪರ್‌ ಆದರೆ ಅಚ್ಚರಿಯೇನಿಲ್ಲ. ಅಮೆರಿಕ 1992ರಿಂದ ಒಲಿಂಪಿಕ್ಸ್‌ ನಲ್ಲಿ ಪ್ರಭುತ್ವ ಸಾಧಿಸುತ್ತ ಬಂದಿದೆ. ಆದರೆ 2008ರ ಬೀಜಿಂಗ್‌ ಕ್ರೀಡಾಕೂಟ ದಲ್ಲಿ ಆತಿಥೇಯ ಚೀನವನ್ನು ಹಿಂದಿಕ್ಕಲಾಗಲಿಲ್ಲ.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಸಾವಿರ ಚಿನ್ನ (1,061) ಹಾಗೂ ಒಟ್ಟು 2 ಸಾವಿರ ಪದಕ ಗೆದ್ದ (2,629) ಏಕೈಕ ದೇಶ ಎಂಬುದು ಅಮೆರಿಕದ ಹಿರಿಮೆಗೆ ಸಾಕ್ಷಿ. ಅನಂತರದ ಸ್ಥಾನದಲ್ಲಿರುವ ರಷ್ಯಾ ಗೆದ್ದ ಒಟ್ಟು ಪದಕ 1,624. ಇದರಲ್ಲಿ ಚಿನ್ನದ ಪದಕಗಳ ಸಂಖ್ಯೆ 608. ಸಾವಿರ ಪದಕ ಜಯಿಸಿದ ಮತ್ತೂಂದು ತಂಡ ಜರ್ಮನಿ (1,386). ಇದರಲ್ಲಿ 438 ಸ್ವರ್ಣ ಪದಕಗಳು ಸೇರಿವೆ.

ಆತಿಥೇಯ ಫ್ರಾನ್ಸ್‌
ಮತ್ತೆ ಪ್ಯಾರಿಸ್‌ ಸಮೀಕ್ಷೆಗೆ ಬರೋಣ. ಅಮೆರಿಕ ಮತ್ತು ಚೀನದ ಬಳಿಕ ಪದಕ ಪಟ್ಟಿಯನ್ನು ಅಲಂಕರಿಸುವ ದೇಶಗ ಳೆಂದರೆ ಬ್ರಿಟನ್‌, ಫ್ರಾನ್ಸ್‌, ಆಸ್ಟ್ರೇಲಿಯ, ಜಪಾನ್‌, ಇಟಲಿ, ಜರ್ಮನಿ, ನೆದ ರ್ಲೆಂಡ್ಸ್‌ ಮತ್ತು ದಕ್ಷಿಣ ಕೊರಿಯಾ.
ಸಾಮಾನ್ಯವಾಗಿ ಆತಿಥೇಯ ದೇಶ ಒಲಿಂಪಿಕ್ಸ್‌ ಪದಕ ಬೇಟೆಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಈ ಬಾರಿ ಫ್ರಾನ್ಸ್‌ ಸರದಿ.

Advertisement

ಅದು ಟೋಕಿಯೊ ಒಲಿಂಪಿಕ್ಸ್‌ ಗಿಂತ 3 ಪಟ್ಟು ಹೆಚ್ಚು ಪದಕಗಳನ್ನು ಗೆಲ್ಲುವ ಸಾಧ್ಯತೆ ಗೋಚರಿಸುತ್ತದೆ. ಸುಮಾರು 60 ಪದಕಗಳು ಫ್ರಾನ್ಸ್‌ ಪಾಲಾಗಬಹುದು. ಇದರಲ್ಲಿ 27 ಚಿನ್ನ ಎಂದು ಅಂದಾಜಿಸಲಾಗಿದೆ. 3 ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆತಿಥೇಯ ಜಪಾನ್‌ 58 ಪದಕ (27 ಚಿನ್ನ) ಗೆದ್ದು ದಾಖಲೆ ಸ್ಥಾಪಿಸಿತ್ತು. ಈ ಬಾರಿ ಕುಸಿತ ಕಾಣಲಿದೆ ಎನ್ನುತ್ತಿದೆ ಸಮೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next