Advertisement

Singapore ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಟ್ರೀಸಾ-ಗಾಯತ್ರಿ

11:11 PM May 31, 2024 | Team Udayavani |

ಸಿಂಗಾಪುರ: ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಮತ್ತೂಂದು ಏರುಪೇರಿನ ಫ‌ಲಿತಾಂಶ ದಾಖಲಿಸಿ ವನಿತಾ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

ಶ್ರೇಯಾಂಕ ರಹಿತ ಭಾರತೀಯ ಜೋಡಿ, ದಕ್ಷಿಣ ಕೊರಿಯಾದ 6ನೇ ಶ್ರೇಯಾಂಕದ ಕಿಮ್‌ ಸೊ ಯೋಂಗ್‌-ಕಾಂಗ್‌ ಹೀ ಯಂಗ್‌ ವಿರುದ್ಧ ರೋಚಕ ಹೋರಾಟ ನಡೆಸಿ 18-21, 21-19, 24-22 ಅಂತರದ ಜಯ ಸಾಧಿಸಿತು. ಇದರೊಂದಿಗೆ ಕಳೆದ ವರ್ಷದ ಏಷ್ಯಾಡ್‌ನ‌ಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಟ್ರೀಸಾ-ಗಾಯತ್ರಿ, ಇದಕ್ಕೂ ಹಿಂದಿನ ಪಂದ್ಯದಲ್ಲಿ ವಿಶ್ವದ ನಂ.2 ಜೋಡಿಯಾದ ಕೊರಿಯಾದ ಬೇಕ್‌ ಹಾ ನಾ-ಲೀ ಸೊ ಹೀ ವಿರುದ್ಧ ಗೆಲುವು ಸಾಧಿಸಿದ್ದರು. ಶನಿವಾರದ ಸೆಮಿಫೈನಲ್‌ನಲ್ಲಿ ಇವರ ಎದುರಾಳಿಯಾಗಿ ಕಣಕ್ಕಿಳಿಯುವವರು ಜಪಾನಿನ 4ನೇ ಶ್ರೇಯಾಂಕದ ನಾಮಿ ಮತ್ಸುಯಾಮಾ ಮತ್ತು ಚಿಹಾರು ಶಿಡ.

ಗುರುವಾರದ ಸಿಂಗಲ್ಸ್‌ ಪಂದ್ಯದಲ್ಲಿ ಪಿ.ವಿ. ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್‌ ಸೋಲನುಭವಿಸಿದ ಕಾರಣ ಟ್ರೀಸಾ-ಗಾಯತ್ರಿ ಜೋಡಿಯ ಮೇಲೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next