ಬೊಟ್ಟು, ತಿಲಕ, ಬಿಂದಿ, ಚುಕ್ಕೆ ಹೀಗೆ ಹಲವಾರು ಹೆಸರಿನಿಂದ ಕರೆಯಲ್ಪಡುವ ಹಣೆಬೊಟ್ಟು ಕೇವಲ ಒಂದು ಚುಕ್ಕೆ ಎನಿಸಿದರು ಅದರಲ್ಲಿರುವ ಮಹತ್ವ ಸಾಮಾನ್ಯವಾದುದಲ್ಲ. ನಾವಿಡುವ ಒಂದು ಚುಕ್ಕೆಗೆ ಮುಖ ಅಷ್ಟೇ ಅಲ್ಲ ನಮ್ಮ ಇಡೀ ದೇಹವನ್ನೇ ಆರೋಗ್ಯವಾಗಿರಿಸುತ್ತದೆ.
ಇದು ಅಲಂಕಾರಿಕ, ಸೌಂದರ್ಯ ಹೆಚ್ಚಿಸುವುದರೊಂದಿಗೆ ನಮ್ಮ ದೇಹದ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ. ಸಿಂಧೂರಂ ಸೌಂದರ್ಯ ಸಾಧನಂ ಎಂಬ ಮಾತಿದೆ. ಅದರಂತೆ ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್ ಮಂಗಳ ಗೌರಿಯಂತೆ ಕಾಣುವುದು ಎಂದು ಹೇಳುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತೈದೆತನದ ಸಂಕೇತವಾಗಿದೆ.
ಬೊಟ್ಟು ಅಥವಾ ಕುಂಕುಮವನ್ನು ಹುಬ್ಬುಗಳ ಮಧ್ಯೆ ಹಚ್ಚುವುದರಿಂದ ನಮ್ಮ ಏಕಾಗ್ರತೆ ಹೆಚ್ಚುತ್ತದೆ. ಅದರೊಂದಿಗೆ ನಮ್ಮ ಮುಖದಲ್ಲಿನ ಮಾಂಸಖಂಡಗಳನ್ನು ಬಲಿಷ್ಠ ವಾಗುತ್ತದೆ, ತಲೆನೋವನ್ನು ಕಡಿಮೆಗೊಳಿಸುತ್ತದೆ, ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಕೋಪವನ್ನು ನಿಯಂತ್ರಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಮೊದಲೆಲ್ಲ ಒಂದು ಚಿಕ್ಕ ಗಾಜಿನ ಡಬ್ಬಿಯಲ್ಲಿ ಬಣ್ಣ – ಬಣ್ಣದ ನೀರಿನ ಬೊಟ್ಟುಗಳು ಸಿಗುತ್ತಿತ್ತು. ಅದರಲ್ಲಿ ಸುಮಾರು 10 ಅಥವಾ 12 ಬಣ್ಣಗಳ ಬೊಟ್ಟುಗಳು ಇರುತ್ತಿತ್ತು. ಪ್ರತಿದಿನ ಒಂದೊಂದು ಹಚ್ಚಿ ಸಂಭ್ರಮಿಸುತ್ತಿದ್ದ ಕಾಲವದು. ತದನಂತರ ಕಾಲಕ್ಕೆ ತಕ್ಕಂತೆ, ಹವ್ಯಾಸಗಳ ತಕ್ಕಂತೆ, ಎಲ್ಲವೂ ಆಧುನಿಕವಾಗುವಂತೆ ಹಣೆಬಟ್ಟುಗಳ ಬದಲಿಗೆ ಟಿಕಲಿಪ್ಯಾಕೆಟ್‌ಗಳು ಮಾರುಕಟ್ಟೆಗೆ ಬಂದವು. ಹೊಸ – ಹೊಸ ರೀತಿಯ ಸ್ಟಿಕರ್‌ಗಳನ್ನು ಕಂಡ ಜನರು ಹಳೆಯ ಕಾಲದ ಕುಂಕುಮದ ಬಟ್ಟಲಿಯನ್ನು ಜನರು ಮೂಲೆಗುಂಪಾಗಿಸಿದರು.
ಬೊಟ್ಟುಗಳಲ್ಲೂ ಕೂಡ ಬದಲಾವಣೆಯಾಯಿತು. ಮೊದಲೆÇÉಾ ಒಂದು ನಾಣ್ಯದಷ್ಟು ದೊಡ್ಡದಾಗಿ ಇಡುತ್ತಿದ್ದ ಬೊಟ್ಟುಗಳು ಈಗ ಸಾಸಿವೆ ಕಾಳಿಗಿಂತಲೂ ಚಿಕ್ಕದಾಗಿದೆ. ಈಗಂತು ತೊಟ್ಟ ವಸ್ತ್ರಕ್ಕೆ ಹೋಳಿಗೆಯಾಗುವುದಿಲ್ಲ ಎಂದು ಖಾಲಿ ಹಣೆಯಲ್ಲಿ ಹೋಗುವ ಅಭ್ಯಾಸವೂ ಟ್ರೆಂಡ್ ಆಗಿದೆ.
ಇವೆಲ್ಲಾ ನಾವು ನಮ್ಮಲ್ಲಿ ತಂದುಕೊಂಡಂತಹ ಬದಲಾವಣೆಗಳು. ಅಂದ -ಚಂದದ ವಿಷಯಕ್ಕೆ ಬಂದರೇ ಒಂದು ಚಿಕ್ಕ ಬೊಟ್ಟಿನಲ್ಲಿರುವ ಸೌಂದರ್ಯ ವರ್ಣಿಸಲು ಸಾಧ್ಯವಿಲ್ಲ. ಅಷ್ಟು ಸುಂದರತೆಯ ಪ್ರತೀಕ ಎಂದೇ ಹೇಳಬಹುದು. ಹೀಗೆ ನಮ್ಮನ್ನು ಸುಂದರವಾಗಿಯೂ ಮತ್ತು ಆರೋಗ್ಯವಾಗಿಯೂ ಎರಡು ರೀತಿಯಲ್ಲಿ ನಮಗೆ ಉಪಯೋಗವಾಗುವ ಹಣೆಬೋಟ್ಟನ್ನು ಇನ್ನಷ್ಟು ಉಪಯೋಗಿಸಿ ಅದರ ಲಾಭವನ್ನು ಪಡೆದುಕೊಳ್ಳೋಣ.
ವಿದ್ಯಾ
ಎಂ.ಜಿ.ಎಂ. ಕಾಲೇ ಜು, ಉಡುಪಿ