Advertisement
400,000 ಡಾಲರ್ ಬಹುಮಾನದ ಈ ಕೂಟದಲ್ಲಿ ಪಿ.ವಿ. ಸಿಂಧು ಕೊರಿಯಾದ ಕಿಮ್ ಗಾ ಯುನ್ ಅವರನ್ನು 36 ನಿಮಿಷಗಳ ಹೋರಾಟದ ಬಳಿಕ 21-15, 21-16 ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಸುತ್ತಿನಲ್ಲಿ ಸಿಂಧು ಎದುರಾಳಿ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್ರುಂಗಫಾನ್.
8ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಚೀನದ ಕೈ ಯಾನ್ ಯಾನ್ ವಿರುದ್ಧ ಸತತ 2ನೇ ಸೋಲುಂಡರು. ಕಳೆದ ವಾರವಷ್ಟೇ “ಚೀನ ಓಪನ್’ ಪಂದ್ಯಾವಳಿಯ ಪ್ರಥಮ ಸುತ್ತಿನಲ್ಲಿ ಸೈನಾಗೆ ಆಘಾತವಿಕ್ಕಿದ್ದ ಯಾನ್ ಯಾನ್, ಇಲ್ಲಿ 21-13, 22-20 ಅಂತರದ ಮೇಲುಗೈ ಸಾಧಿಸಿದರು. ಇದರೊಂದಿಗೆ ಸೈನಾ ನೆಹ್ವಾಲ್ ಕಳೆದ 6 ಬ್ಯಾಡ್ಮಿಂಟನ್ ಕೂಟಗಳಲ್ಲಿ 5 ಸಲ ಮೊದಲ ಸುತ್ತಿನಲ್ಲೇ ಎಡವಿದ ಸಂಕಟಕ್ಕೆ ಸಿಲುಕಿದಂತಾಯಿತು.
Related Articles
ವಿಶ್ವದ 16ನೇ ರ್‍ಯಾಂಕಿಂಗ್ ಆಟಗಾರ ಸಮೀರ್ ವರ್ಮ 54 ನಿಮಿಷಗಳ ಹೋರಾಟದ ಬಳಿಕ ಚೈನೀಸ್ ತೈಪೆಯ ವಾಂಗ್ ಜು ವೀ ವಿರುದ್ಧ 11-21, 21-13, 8-21 ಅಂತರದ ಸೋಲನುಭವಿಸಿದರು. ಇದು ಸಮೀರ್ ಪಾಲಿಗೆ ಎದುರಾದ ಮೊದಲ ಸುತ್ತಿನ ಹ್ಯಾಟ್ರಿಕ್ ಸೋಲಾಗಿದೆ.
Advertisement
ಪರಾಜಿತ ಸೈನಾ ನೆಹ್ವಾಲ್ ಮತ್ತು ಸಮೀರ್ ವರ್ಮ ಇಬ್ಬರೂ ಮುಂದಿನ ವಾರ ನಡೆಯುವ “ಗ್ವಾಂಗ್‌ಜೂ ಕೊರಿಯಾ ಮಾಸ್ಟರ್ ಸೂಪರ್ 300′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಕೂಡ ಆರಂಭಿಕ ಸುತ್ತಿನಲ್ಲೇ ಎಡವಿದ್ದಾರೆ. ಡೆನ್ಮಾರ್ಕ್‌ನ ಮೈಕೆನ್ ಫ್ರುರ್‌ಗಾರ್ಡ್-ಸಾರಾ ತೈಗೆಸೆನ್ 21-13, 21-12 ಅಂತರದಿಂದ ಭಾರತೀಯ ಜೋಡಿಯನ್ನು ಮಣಿಸಿದರು.