Advertisement

ಚೀನ ಓಪನ್‌ ಬ್ಯಾಡ್ಮಿಂಟನ್‌: ಸವಾಲಿಗೆ ಸಿಂಧು ಸಿದ್ಧ

06:30 AM Nov 06, 2018 | Team Udayavani |

ಫ‌ುಜೂ (ಚೀನಾ): ಭಾರತದ ಅಗ್ರ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಮಂಗಳವಾರದಿಂದ ಆರಂಭವಾಗಲಿರುವ “ಚೀನಾ ಓಪನ್‌’ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಆರಂಭಿಕ ಸುತ್ತಿನಲ್ಲಿ ರಷ್ಯಾದ ಎವೆYನಿಯಾ ಕೊಸೆತ್ಸಕಾಯ ಅವರನ್ನು ಎದುರಿಸಲಿದ್ದಾರೆ. 

Advertisement

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಸಿಂಧು ಈ ಟೂರ್ನಿಯಲ್ಲಿ ಗೆಲುವು ದಾಖಲಿಸುತ್ತ ಹೋದರೆ ಸೆಮಿಫೈನಲ್‌ನಲ್ಲಿ ಜಪಾನ್‌ನ ನೊಜೊಮಿ ಒಕುಹಾರ ಅವರನ್ನು ಎದುರಿಸುವ ಸಾಧ್ಯತೆ ಇದೆ. ವನಿತಾ ಸಿಂಗಲ್ಸ್‌ ವಿಭಾಗದಲ್ಲಿ ಮತ್ತೂಬ್ಬ ಭಾರತೀಯ ಸ್ಪರ್ಧಿ ವೈಷ್ಣವಿ ರೆಡ್ಡಿ ಜಕ್ಕಾ ಕೂಡ ಕಣಕ್ಕಿಳಿಯಲಿದ್ದು, ಬುಧವಾರ ಥಾಯ್ಲೆಂಡ್‌ನ‌ ಪೊರ್ನ್ಪವಿ ಚೊಚುವಾಂಗ್‌ ವಿರುದ್ಧ ಆಡಲಿದ್ದಾರೆ. ಮಂಗಳವಾರದ ಪುರುಷರ ಡಬಲ್ಸ್‌ ವಿಭಾಗದಲ್ಲಿ ಮನು ಅತ್ರಿ- ಬಿ.ಸುಮೀತ್‌ ರೆಡ್ಡಿ ಜೋಡಿ ಸ್ಪರ್ಧೆಗಿಳಿಯಲಿದೆ. ಪುರುಷರ ಸಿಂಗಲ್ಸ್‌ ವಿಭಾಗದ ಸ್ಪರ್ಧೆ ಬುಧವಾರ ಆರಂಭವಾಗಲಿದ್ದು, ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಎಚ್‌. ಎಸ್‌ ಪ್ರಣಯ್‌ ಮೇಲೆ ನಿರೀಕ್ಷೆ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next