Advertisement

ಪ್ರಯಾಣಿಕರ ಸಂಖ್ಯೆ ವಿರಳ: ಬಳ್ಳಾರಿಗೆ ಯಾರೂ ಹೋಗಿಲ್ಲ

03:48 PM May 20, 2020 | Naveen |

ಸಿಂಧನೂರು: ರಾಜ್ಯ ಸರಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ ಅಂತರ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ನಗರದ ಘಟಕದಿಂದ 20 ಬಸ್‌ ಸಂಚಾರ ಮಂಗಳವಾರ ಆರಂಭವಾಯಿತು. ನಿರ್ವಾಹಕರು ಹಾಗೂ ಚಾಲಕರು ಪ್ರಯಾಣಿಕರಿಗಾಗಿ ಕಾಯುತ್ತಿರುವುದು ಕಂಡು ಬಂತು.

Advertisement

ಸಿಂಧನೂರಿನಿಂದ ರಾಯಚೂರು, ಕೊಪ್ಪಳ, ಬಳ್ಳಾರಿ, ಕುಷ್ಟಗಿ, ಲಿಂಗಸುಗೂರು, ಗಂಗಾವತಿಗೆ ಬೆಳಗ್ಗೆ 7:00ರಿಂದ ಸಂಜೆ 7:00ರ ವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಆದರೆ ಬೆಳಗ್ಗೆ 11:00 ಗಂಟೆಯವರೆಗೂ ಬಳ್ಳಾರಿಗೆ ತೆರಳುವ ಯಾವೊಬ್ಬ ಪ್ರಯಾಣಿಕರು ಬರಲಿಲ್ಲ. ಹಾಗಾಗಿ ಬಳ್ಳಾರಿಗೆ ತೆರಳುವ ಬಸ್‌ನ್ನು ಪುನಃ ಘಟಕಕ್ಕೆ ಕಳುಹಿಸಲಾಯಿತು. ಇನ್ನಿತ್ತರ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ತೆರಳಿದ ಬಸ್‌ಗಳಲ್ಲಿಯೂ ನಿಗದಿತ ಪ್ರಯಾಣಿಕರು ಇರಲಿಲ್ಲ. ಹಾಗಾಗಿ ಒಂದೊಂದೆ ಬಸ್‌ನ್ನು 2ರಿಂದ 3ಗಂಟೆ ತಡವಾಗಿ ಸಂಚಾರಕ್ಕೆ ಬಿಡಲಾಯಿತು.

ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಬಸ್‌ ನಿಲ್ದಾಣದಲ್ಲಿ ಕುರ್ಚಿಗಳು ಖಾಲಿ ಇರುವುದು ಕಂಡು ಬಂತು. ಅಂತರ ಜಿಲ್ಲೆಗಳಿಗೆ ತೆರಳುವ ನಿರ್ವಾಹಕ ಹಾಗೂ ಚಾಲಕರಿಗೆ ಮಾಸ್ಕ್, ಸ್ಯಾನಿಟೈರಿಸ್‌ ಹಾಗೂ ಕೈಗವಸ ಮತ್ತು ಎಲ್ಲ ಬಸ್‌ಗಳಿಗೂ ಸ್ಪ್ರೇ ಮಾಡಿಸಿ ಘಟಕದಿಂದ ಹೊರಗಡೆಗೆ ಕಳುಹಿಸಲಾಯಿತು. ಅಂತರ ಜಿಲ್ಲೆಗಳಿಗೆ ತೆರಳಿದ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯಿಂದ ತಪಾಸಣೆ ಮಾಡಿದ ನಂತರ ಬಸ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next