Advertisement
ಈ ವೇಳೆ ಟಿಯುಸಿಐ ಕಾರ್ಯದರ್ಶಿ ಶೇûಾಖಾದ್ರಿ ಮಾತನಾಡಿ, ಈಗಾಗಲೇ ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಅನೇಕ ಕಟ್ಟಡ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿ ನಿತ್ಯ ದಿನ ಬಳಕೆ ಆಹಾರ ಸಾಮಗ್ರಿ ಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಇಸ್ಕಾನ್ ಹಾಗೂ ಚೇತನ ಸ್ವಯಂ ಸೇವಕ ಸಂಘಗಳು ಬಡ ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಿಸುವಂತೆಯೇ ಇಲ್ಲಿಯೂ ಅಗತ್ಯ ದಿನ ಬಳಕೆ ಸಾಮಗ್ರಿ ಒದಗಿಸಬೇಕು, ಹರಿಯಾಣ ಸರ್ಕಾರ ಕಟ್ಟಡ ಕಾರ್ಮಿಕರಿಗೆ ವಾರಕ್ಕೆ 6 ಸಾವಿರ ಪ್ರೋತ್ಸಾಹಧನ ನೀಡಬೇಕು, ನೋಂದಣೆ ಮಾಡದ ಕಟ್ಟಡ ಕಾರ್ಮಿಕರಿಗೂ ಆಹಾರ ಸಾಮಗ್ರಿ ವಿತರಿಸಬೇಕೆಂದು ಆಗ್ರಹಿಸಿದರು. ಕಟ್ಟಡ ಕಾರ್ಮಿಕ ಒಕ್ಕೂಟದ ತಾಲೂಕಾಧ್ಯಕ್ಷ ನನ್ನುಸಾಬ್ ಮೇಸ್ತ್ರಿ ಸೇರಿದಂತೆ ಇತರರು ಇದ್ದರು. Advertisement
ಕಟ್ಟಡ ಕಾರ್ಮಿಕರಿಗೆ ಆಹಾರ-ಪಡಿತರ ಒದಗಿಸಿ
05:24 PM Apr 17, 2020 | Naveen |
Advertisement
Udayavani is now on Telegram. Click here to join our channel and stay updated with the latest news.