Advertisement

ಬಿಜೆಪಿ ಬಂಡವಾಳಶಾಹಿಗಳ ಪರ

01:31 PM Apr 11, 2019 | Naveen |

ಸಿಂಧನೂರು: ದೇಶದಲ್ಲಿ ಐದು ವರ್ಷ ಆಡಳಿತ ನಡೆಸಿದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂಡವಾಳಶಾಹಿಗಳ ಪರ ಆಡಳಿತ ನಡೆಸಿದೆ ಎಂದು ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಟೀಕಿಸಿದರು.

Advertisement

ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್‌-ಜೆಡಿಎಸ್‌
ಕಾರ್ಯಕರ್ತರ ಮತ್ತು ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. 65 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ ಪಕ್ಷ ಅನೇಕ ಜನಪರ ಯೋಜನೆಗಳು ತಂದು ದೀನ-ದಲಿತರ, ಬಡವರ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಕಳೆದ ಕಾಂಗ್ರೆಸ್‌ ಆಡಳಿತದಲ್ಲಿ ಹಾಗೂ ಈಗಿನ ಮೈತ್ರಿ ಸರ್ಕಾರದಲ್ಲಿ ರೈತರಿಗೆ ಕೂಲಿ-ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಬೇಕೆಂದು ಕೋರಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬಿಜೆಪಿ ಆಡಳಿತದಿಂದ ಈಗಾಗಲೇ ಜನಸಾಮಾನ್ಯರಿಗೆ ಬೇಸರವಾಗಿದೆ. ಇದೊಂದು ಸುಳ್ಳಿನ ಸರ್ಕಾರವಾಗಿದೆ. ಸರ್ಜಿಕಲ್‌ ಸ್ಟ್ರೇಕ್‌ನ್ನು ಮೋದಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಅಭಿವೃದ್ಧಿ
ಮತ್ತು ಜನಸಾಮಾನ್ಯರ ಹಿತಕ್ಕಾಗಿ ಕಾಂಗ್ರೆಸ್‌ ಗೆ ಮತ ನೀಡಬೇಕೆಂದು ಕೋರಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕೊಪ್ಪಳ
ಲೋಕಸಭೆ ವ್ಯಾಪ್ತಿಯಲ್ಲಿ ಕಳೆದ 10 ವರ್ಷದಿಂದ ಕೇಂದ್ರ ಸರ್ಕಾರದಿಂದ ಯಾವೊಂದು ಜನಪರ ಯೋಜನೆಗಳು ಜಾರಿಯಾಗಿಲ್ಲ. ಯಾರೂ ಜಾತಿ ಭೇದ ಮಾಡದೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಕೋರಿದರು.

ಶಾಸಕ ಪ್ರತಾಪಗೌಡ ಪಾಟೀಲ, ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ, ಕೆಪಿಸಿಸಿ ಕೆ.ಕೆರಿಯಪ್ಪ, ಜೆಡಿಎಸ್‌ ತಾಲೂಕು ಅಧ್ಯಕ್ಷ ಲಿಂಗಪ್ಪ ಸಾಹುಕಾರ, ಬಸವಂತರಾಯ ಕುರಿ, ಆರ್‌.ತಿಮ್ಮಯ್ಯ ನಾಯಕ, ರಾಯಪ್ಪ ವಕೀಲ,
ಬಾಬರ ಪಾಷಾ, ಎಚ್‌.ಎನ್‌.ಬಡಿಗೇರ, ಖಾಜಾಮಲಿಕ್‌ ವಕೀಲ ಇತರರು ಇದ್ದರು.

ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಮಾತ್ರ ಬಡವರ ಬಗ್ಗೆ
ಮಾತನಾಡುತ್ತಾರೆ. ಆದರೆ ಅವರ ಆಡಳಿತ ಮಾತ್ರ ಬಂಡವಾಳ ಶಾಹಿಗಳ
ಪರ ಇದೆ. ಇವರ ಮಾತಿಗೆ ಯಾರೂ ಮರುಳಾಗಬಾರದು. ಈ ಬಾರಿ ಲೋಕಸಭೆ
ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು.
ರಾಜಶೇಖರ ಹಿಟ್ನಾಳ,
ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next