Advertisement

ಕೋವಿಡ್ ತೊಲಗಿಸಲು ಕೈಜೋಡಿಸಿ

03:53 PM Apr 22, 2020 | Naveen |

ಸಿಂದಗಿ: ಕೋವಿಡ್ ಸೋಂಕು ನಿವಾರಣೆಗೆ ನಾವೆಲ್ಲರೂ ಜಾಗೃತರಾಗೋಣ ಎಂದು ಗ್ರಾಪಂ ಅಧ್ಯಕ್ಷ ಅರುಣಕುಮಾರ ಸಿಂಗೆ ಹೇಳಿದರು. ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡ ಸ್ಯಾನಿಟೈಸರ್‌ ಸಿಂಪಡನೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕು ತಗುಲಿದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಪೂರ್ವದಲ್ಲಿಯೇ ತಗುಲದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದರು. ಕೋವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು. ಯಾವ ಕಾಲಕ್ಕೂ ಜನರು ಗುಂಪು ಗುಂಪಾಗಿ ಸೇರಬಾರದು. ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ತಾವೇ ನಿಯಂತ್ರಣ ಮಾಡಿಕೊಳ್ಳಬೇಕು. ಈಗಾಗಲೇ ಈ ಮಾರಣಾಂತಿಕ ರೋಗವು ಭಾರತದಲ್ಲಿ ಪ್ರವೇಶ ಪಡೆದಿದ್ದು, ಅದು ಹೆಚ್ಚಿಗೆ ಹರಡದಂತೆ ನೋಡಿಕೊಳ್ಳುವ ಮೂಲಕ ಕೊರೊನಾ ಮುಕ್ತ ರಾಷ್ಟ್ರಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸರಕಾರದ ಆದೇಶಗಳು ಎಷ್ಟೇ ಕಷ್ಟವಾದರೂ ನಾವೆಲ್ಲರೂ ಪಾಲಿಸಬೇಕು. ಜನರು ಪ್ರಜ್ಞೆಯುಳ್ಳವರಾಗಬೇಕು. ಮಾರಣಾಂತಿಕ ಕೋವಿಡ್ ಹರಡದಂತೆ ಸಂಕಷ್ಟದ ಈ ಸಂದರ್ಭದಲ್ಲಿ ಶಕ್ತಿ ಮೀರಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಗ್ರಾಪಂ ಮೂಲಕ ಹಳ್ಳಿಗಳಲ್ಲಿ ಸ್ಯಾನಿಟೈಸರ್‌ ಸಿಂಪಡನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಾವ್ಯಾರು ಮನೆಯಿಂದ ಹೊರ ಬರಬಾರದು ಮನೆಯಲ್ಲಿಯೆ ಕುಳಿತು ಕೋವಿಡ್ ನಿಂದ ಮುಕ್ತರಾಗೋಣ ಎಂದು ಮನವಿ ಮಾಡಿಕೊಂಡರು.

ಪಿಡಿಒ ಜಯಕುಮಾರ ದೇವರನಾವದಗಿ, ಗ್ರಾಮ ಲೆಕ್ಕಾ ಧಿಕಾರಿ ವೈ.ಸಿ. ಜಂಗಶೆಟ್ಟಿ, ಬಂದೇನವಾಜ್‌ ಕಣ್ಣಿ, ಬಸಲಿಂಗಪ್ಪ ಬೋನಾಳ, ಅಲ್ಲಾಭಕ್ಷ ಬಾಗವಾನ, ಹಸನಸಾಬ ಶಿರಶ್ಯಾಡ, ಮಲ್ಲು ದುದ್ದಗಿ, ರಾಮು ಗೊಲ್ಲರ, ಎಂ.ಕೆ. ಮುಲ್ಲಾ, ಭೀಮಣ್ಣ ಹೋಳಿ, ಹಾವಣ್ಣ ಕಕ್ಕಳಮೇಲಿ, ರಫೀಕ್‌ ದೇವರನಾದಗಿ, ಪಿಂಟು ಭಾರತಿ ಸಾವಳಿಗೆಪ್ಪ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next