Advertisement

ತೋಟದಲ್ಲಿಯೇ ಕೊಳೆಯುತ್ತಿದೆ ಕುಂಬಳಕಾಯಿ

03:52 PM Apr 07, 2020 | Naveen |

ಸಿಂದಗಿ: ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಾಲೂಕಿನ ಬಿಸನಾಳ, ಆಹೇರಿ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ
ಬೆಳೆದಿರುವ ಕುಂಬಳಕಾಯಿ ಮಾರಾಟವಾಗದೆ ತೋಟದಲ್ಲಿಯೇ ಕೊಳೆಯುತ್ತಿದೆ. ತಾಲೂಕಿನ ಮೋರಟಗಿ ಭಾಗದ ಬಿಸನಾಳ, ಆಹೇರಿ ಹಾಗೂ ಇತರ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ರೈತರು 50 ಏಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದು, ಮಾರುಕಟ್ಟೆ ಸಾಗಾಣಿಕೆ ಮಾಡಲು ಆಗದೆ ಇರುವುದರಿಂದ ಕುಂಬಳಕಾಯಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಪ್ರತಿ ಎಕರೆಗೆ 90 ಸಾವಿರ ರೂ. ಲಾಭ ಪಡೆಯುವ ರೈತರು ಇಂದು ಅವರಿಗೆ ಮಾರುಕಟ್ಟೆ ಸಾಗಾಣಿಕೆ ಮಾಡಲು ಆಗದೇ
ಇರುವುದರಿಂದ ನಷ್ಟ ಅನುಭವಿಸುವಂತಾಗಿದೆ.

Advertisement

ಸಾಲ ಮಾಡಿ ಬೆಳೆದ ಕುಂಬಳಕಾಯಿಯನ್ನು ಅನಿವಾರ್ಯವಾಗಿ ಗ್ರಾಮಗಳಲ್ಲಿ ಉಚಿತವಾಗಿ ಹಂಚಲಾಗುತ್ತಿದೆ ಎಂದು ರೈತರಾದ ಬಸಲಿಂಗಪ್ಪ
ಪಾಟೀಲ, ಬುಕರಾಯಗೌಡ ಬಿರಾದಾರ, ಶರಣಪ್ಪ ಪಾಟೀಲ, ಚನ್ನಬಸಪ್ಪ ಬಿರಾದಾರ, ಮಲಗೊಂಡಪ್ಪ ಪಾಟೀಲ, ಶಂಕರಗೌಡ ಬಿರಾದಾರ, ಬಾಳಪ್ಪ
ಪಾಟೀಲ, ಯಲ್ಲಪ್ಪ ಬಿರಾದಾರ, ರೇವಣಸಿದ್ದಪ್ಪ ಪೂಜಾರಿ, ಸಿದ್ರಾಮಪ್ಪ ಪಾಟೀಲ, ಶರಣಪ್ಪ ಪೂಜಾರಿ, ಶರಣಪ್ಪ ಮಂಗಾಳಿ, ಚಂದಪ್ಪ ಬಿರಾದಾರ, ರೇವಣಸಿದ್ದಪ್ಪ ಜೇರಟಗಿ, ಅಮೋಘಸಿದ್ದ ಅಳಲು ತೋಡಿಕೊಂಡಿದ್ದಾರೆ.

ತೋಟಗಾರಿಕೆ ಬೆಳೆ ಬೆಳೆದ ರೈತರು ಆತ್ಮ ಸ್ಥೈರ್ಯ ಕಳೆದುಕೊಳ್ಳಬೇಡಿ. ತಾವು ಬೆಳೆದ ಬೆಳೆಗಳ ಮಾಹಿತಿ ನೀಡಿ. ಸೂಕ್ತ ಮಾರುಕಟ್ಟೆ
ತಿಳಿದುಕೊಳ್ಳೋಣ. ಸಾಗಾಣಿಕೆಗೆ ಅನುಮತಿ ನೀಡಲಾಗುವುದು. ಯಾವುದು ತೊಂದರೆ ಆಗುವುದಿಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಘಿ ಹಿರೇಕುರಬರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next