Advertisement

ಕಾಯಕಲ್ಪಕ್ಕೆ ಕಾದಿರುವ ಜ್ಞಾನ ಭಂಡಾರ

04:10 PM Oct 30, 2019 | Naveen |

ಸಿಂದಗಿ: ಗ್ರಂಥಾಲಯಗಳು ಅರಿವಿನ ಜ್ಞಾನ ದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಬೆಳಕನ್ನು ನೀಡುವ ಭಂಡಾರಗಳು. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿ ಹೋಗುವುದಿಲ್ಲ. ಆದರೆ ನಿರ್ವಹಣೆ ಕೊರತೆಯಿಂದ, ಸರಕಾರದ ನಿರ್ಲಕ್ಷ್ಯದಿಂದ ನಮಗೆ ಜ್ಞಾನ ನೀಡುವ ಗ್ರಂಥಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಅದಕ್ಕೆ ಸಿಂದಗಿಯ ಸಾರ್ವಜನಿಕ ಗ್ರಂಥಾಲಯವೇ ಮೂಕ ಸಾಕ್ಷಿ.

Advertisement

ಸಿಂದಗಿಯ ಹೃದಯ ಭಾಗದಲ್ಲಿ ಸ್ವತಂತ್ರ ಪೂರ್ವದಲ್ಲಿಯೇ ಪ್ರಾರಂಭವಾದ ವಾಚನಾಲಯಕ್ಕೆ ಸ್ಥಾನಿಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಾಚನಾಲಯದ ನೂತನ ಕಟ್ಟಡವನ್ನು 25ನೇ ನವೆಂಬರ್‌1956 ರಂದು ಬೆಳಗಾವಿ ಕಮಿಷನರ್‌ ಕೆ.ಪಿ. ರಾಮನಾಥಯ್ಯ ಉದ್ಘಾಟಿಸಿದರು.

ಆದರೆ ಈಗ ಈ ಕಟ್ಟಡ ಸಂಪೂರ್ಣ ಬಿದ್ದಿದ್ದು ಅದು ಕೊಳಚೆಯಾಗಿದೆ. ಈಗ ಇದು ಅಲ್ಲಿ ಸಾರ್ವಜನಿಕರು ಬಯಲು ಶೌಚಾಲಯವನ್ನಾಗಿ ಬಳಕೆ ಮಾಡುತ್ತಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ವಾಚನಾಲಯ 1984ರ ಫೆಬ್ರವರಿ 15ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಒಳಪಟ್ಟಿತು.

ನಂತರ ದಿನಗಳಲ್ಲಿ ಗ್ರಂಥಾಲಯಕ್ಕೆ 3 ಕೋಣೆಗಳುಳ್ಳ ಕಟ್ಟಡ ನಿರ್ಮಾಣವಾಯಿತು. ಆದರೆ ಈಗ ಈ ಕಟ್ಟಡ ಒಂದು ಕೋಣೆ ಶಿಥಿಲಾವಸ್ಥೆಯಲ್ಲಿದೆ. ಆ ಕೋಣೆಯನ್ನು ಸಂಗ್ರಹ ಕೋಣೆಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಇನ್ನೊಂದು ಕೋಣೆಯಲ್ಲಿ ಗ್ರಂಥಗಳ ಸಂಗ್ರಹ, ಇನ್ನೊಂದರಲ್ಲಿ ಓದಲಿಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗ್ರಂಥಾಲಯದಲ್ಲಿ 32 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ ಪುಸ್ತಕ ಇಡಲು ರ್ಯಾಕ್‌ಗಳ ಕೊರತೆಯಿದೆ. ಹೊಸದಾಗಿ ಬಂದ ಪುಸ್ತಕಗಳು ಹಾಗೇ ಗಂಟಿನಲ್ಲಿ ಉಳಿದಿವೆ. ಹಳೆಯದಾದ ಸುಮಾರು 2 ಸಾವಿರದಷ್ಟು ಪುಸ್ತಕಗಳನ್ನು ಗಂಟು ಕಟ್ಟಿ ಮೇಲೆ ಇಡಲಾಗಿದೆ.

Advertisement

1640 ಸದಸ್ಯರಿದ್ದಾರೆ. ಆದರೆ ಕುಳಿತು ಓದಲಿಕ್ಕೆ 4 ಟೇಬಲ್‌ಗ‌ಳಿದ್ದು ಸ್ಥಳಾಭವದ ಕೊರತೆ ಎದ್ದು ಕಾಣುತ್ತಿದೆ. ಗ್ರಂಥಾಲಯದ ಮುಂದುಗಡೆ ಇರುವ ಜಾಗದಲ್ಲಿ ಮಾಂಸದ ಮತ್ತು ತತ್ತಿ ತಿನಿಸಿನ ಪದಾರ್ಥಗಳನ್ನು ಮಾರಾಟ ಮಾಡುವ ಡಬ್ಟಾ ಅಂಗಡಿಗಳು ಇವೆ. ಆದ್ದರಿಂದ ಗ್ರಂಥಾಲಯಕ್ಕೆ ಮಕ್ಕಳು, ಮಹಿಳೆಯರು ಓದಲಿಕ್ಕೆ ಬರುತ್ತಿಲ್ಲ. ಈ ಕುರಿತು ಗ್ರಂಥಾಲಯದ ಅಧಿಕಾರಿಗಳು ಪುರಸಭೆಗೆ ಎಷ್ಟೇ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಂಥಪಾಲಕರ ಹುದ್ದೆ ಖಾಲಿಯಿದೆ. ಗ್ರಂಥಾಲಯದ ಸಹವರ್ತಿ ಇವರು ಗ್ರಂಥಾಲಯವನ್ನು ನಡೆಸಿಕೊಂಡು ಹೋಗುತ್ತಾರೆ. ದಿನಗೂಲಿ ಮೇಲೆ ಒಬ್ಬ ಸಿಪಾಯಿ ಕೆಲಸ ಮಾಡುತ್ತಿದ್ದಾನೆ.

ಗ್ರಂಥಾಲಯದ ಕಟ್ಟದ ಹಿಂದುಗಡೆ ಕಟ್ಟಡದ ಎರಡು ಪಟ್ಟು ಇನ್ನೂ ಖಾಲಿ ಜಾಗವಿದೆ. ಅಲ್ಲದೆ ಗ್ರಂಥಾಲಯಕ್ಕೆ ಸಂಬಂಧಿಸಿದ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಆದ್ದರಿಂದ ಜನಪ್ರತಿನಿ ಧಿಗಳು ಕ್ಷೇತ್ರದ ಅಭಿವೃದ್ಧಿ ಜೊತೆಗೆ ಗ್ರಂಥಾಲಯದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next