Advertisement

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ- ರಾಜ್ಯ ಸರ್ಕಾರ ಕ್ರಮ: ಭೂಸನೂರ

06:31 PM May 08, 2020 | Naveen |

ಸಿಂದಗಿ: ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿವೆ. ಲಾಕ್‌ಡೌನ್‌ನಿಂದ ನಿರಾಶ್ರಿತರಾದ ಅನೇಕ ಕುಟುಂಬಗಳಿಗೆ ನೆರವು ನೀಡಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಇತ್ತೀಚೆಗೆ ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದ ನಿರಾಶ್ರಿತರಿಗಾಗಿ ತಾಲೂಕಾ ಆಡಳಿತ ಹಮ್ಮಿಕೊಂಡ ಅನ್ನ ದಾಸೋಹ ಕೇಂದ್ರಕ್ಕೆ ಆಹಾರ ಧಾನ್ಯ ದೇಣಿಗೆ ನೀಡಿ ಅವರು ಮಾತನಾಡಿದರು. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ನಿರ್ಗತಿಕರು, ಕಡು ಬಡವರಿಗೆ ತಾಲೂಕು ಆಡಳಿತದಿಂದ ತಹಶೀಲ್ದಾರ್‌ ಸಂಜೀವಕುಮಾರ ದಾಸರ ನೇತೃತ್ವದಲ್ಲಿ ದಾಸೋಹ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಈ ದಾಸೋಹ ಕೇಂದ್ರಕ್ಕೆ ಆಹಾರ ದಾನ್ಯಗಳನ್ನು ನೀಡುವ ಜೊತೆಗೆ ಆಲಮೇಲ ತಾಲೂಕಿನಲ್ಲಿನ ಕ್ಷೌರಿಕ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವ ಹಡಪದ ಸಮಾಜದ 50 ಕುಟುಂಬಗಳಿಗೆ ಆಹಾರದ ಕಿಟ್‌ ನೀಡಲಾಗಿದೆ ಎಂದು ಹೇಳಿದರು.

ಶಾಸಕ ರಮೇಶ ಭೂಸನೂರ ಅವರು ತಾಲೂಕು ಆಡಳಿತದ ಅನ್ನದಾಸೋಹ ಕೇಂದ್ರಕ್ಕೆ 10 ಕ್ವಿಂಟಲ್‌ ಅಕ್ಕಿ, 5 ಕ್ವಿಂಟಲ್‌ ಸಕ್ಕರೆ, 5 ಕ್ವಿಂಟಲ್‌ ರವೆ ಹಾಗೂ 30 ಕೆಜಿ ಡಾಲ್ಡಾ ನೀಡಿದರು. ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ, ಸಂತೋಷ ಪಾಟೀಲ ಡಂಬಳ ಮಾತನಾಡಿದರು. ತಹಶೀಲ್ದಾರ್‌ ಸಂಜೀವಕುಮಾರ ದಾಸರ ಮಾತನಾಡಿ, ತಾಲೂಕು ಆಡಳಿತದಿಂದ ಅನೇಕ ದಿನಗಳಿಂದ ಅನ್ನ ದಾಸೋಹ ನಡೆಯುತ್ತಿದೆ. ಪ್ರತಿ ನಿತ್ಯ ಅನೇಕ ಬಡ ಹಾಗೂ ನಿರಾಶ್ರಿತರು ಇಲ್ಲಿ ಊಟ ಮಾಡುತ್ತಿದ್ದಾರೆ. ಇದೊಂದು ಮಾನವೀಯ ಕಾರ್ಯ. ದಾನಿಗಳು ನಿತ್ಯವು ಇದಕ್ಕೆ ಸಹಾಯ ಹಸ್ತ ನೀಡುತ್ತಿದ್ದಾರೆ. ನಾವು ದಿನಾಲು 2 ಹೊತ್ತು ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಆದರೆ ಇನ್ನು ಮುಂದೆ ದಾನಿಗಳು ಆಹಾರ ಧಾನ್ಯ ಕೊಡಲು ಮುಂದಾದಲ್ಲಿ ದಿನಕ್ಕೆ 3 ಬಾರಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಇದೇ ಸಂದಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅವರು ಪತ್ರಕರ್ತರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದರು. ಪುರಸಭೆ ಸದಸ್ಯ ಮಹಾಂತಗೌಡ ಬಿರಾದಾರ, ಸಿದ್ದು ಬುಳ್ಳಾ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸುನಂದಾ ಯಂಪುರೆ, ಅನಸುಬಾಯಿ ಪರಗೊಂಡ, ರವಿ ನಾಯ್ಕೋಡಿ, ಸಿದ್ರಾಯ ಪೂಜಾರಿ, ಶಿವು ಆಲಮೇಲ, ಗುರು ತಳವಾರ, ಸಾಯಬಣ್ಣ ದೇವರಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next