Advertisement
ಎಲ್ಲ ಅಧಿಕಾರಿಗಳಿಗೂ ಏಕಕಾಲದಲ್ಲಿ ಸಂದೇಶ, ಸೂಚನೆ ರವಾನಿಸಿ, ಸಂಬಂಧಪಟ್ಟ ಅಧಿಕಾರಿಗಳು ತತ್‌ಕ್ಷಣವೇ ಸ್ಪಂದಿಸುವುದು ಮತ್ತು ಸ್ಪಂದಿಸಿದ ಕೆಲಸ ಕಾರ್ಯಗಳ ಬಗ್ಗೆ ಪಾಲಿಕೆ ಆಯುಕ್ತರಿಗೆ ವರದಿ ನೀಡುವುದು ವಾಕಿಟಾಕಿ ವ್ಯವಸ್ಥೆ ಅಳವಡಿಕೆಯ ಉದ್ದೇಶವಾಗಿದೆ. ಅದರಂತೆ, ಪಾಲಿಕೆ ಚುನಾವಣೆಗೂ ಕೆಲವು ದಿನಗಳ ಮುನ್ನ 60 ವಾಕಿಟಾಕಿಗಳನ್ನು ತರಿಸಿ ಎಲ್ಲ ಹಿರಿಯ, ಕಿರಿಯ, ಸಹಾಯಕ, ಕಾರ್ಯಕಾರಿ ಅಭಿಯಂತರರು, ಆರೋಗ್ಯ ನಿರೀಕ್ಷಕರು ಸೇರಿದಂತೆ ಫೀಲ್ಡ್ ಅಧಿಕಾರಿಗಳಿಗೆ ನೀಡಲಾಗಿದೆ. ಅಧಿಕಾರಿಗಳಿಗೆ ವಾಕಿಟಾಕಿ ನೀಡಿದ ಅನಂತರ ಕೆಲಸ ಕಾರ್ಯಗಳು ವೇಗ ಪಡೆಯುತ್ತಿರುವುದು ಕಂಡು ಬರುತ್ತಿದ್ದು ಎನ್ನುತ್ತಾರೆ ಪಾಲಿಕೆ ಉಪ ಆಯುಕ್ತರು.
ಮೊಬೈಲ್ ಫೋನ್ ಬಳಕೆಯ ಯುಗ ವಾದರೂ ಮೊಬೈಲ್ ಮುಖಾಂತರ ಏಕಕಾಲಕ್ಕೆ ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯ ವಾಗುವುದಿಲ್ಲ. ಅಲ್ಲದೆ ಕೆಲವೊಮ್ಮೆ ಮೊಬೈಲ್ ನೆಟÌರ್ಕ್ ಸಿಗದಿರುವುದು, ಕರೆ ಸ್ವೀಕರಿಸದಿರುವುದು, ಸಂದೇಶ ನೋಡದಿರುವುದು ಮುಂತಾದ ಕಾರಣ ಗಳಿಂದಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ತತ್‌ಕ್ಷಣಕ್ಕೇ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಇದರಿಂದ ತತ್‌ಕ್ಷಣಕ್ಕೇ ಆಗಬೇಕಾದ ಕೆಲಸಗಳೂ ಬಾಕಿಯಾಗುತ್ತವೆ. ಈ ನಿಟ್ಟಿನಲ್ಲಿ ಯೋಚಿಸಿದ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಪಾಲಿಕೆ ಕೆಲಸ ಕಾರ್ಯಗಳು ವೇಗ ಪಡೆಯಲು ವಾಕಿಟಾಕಿ ವ್ಯವಸ್ಥೆ ಅಳವಡಿಸಲು ಮುಂದಾದರು. ವಾಕಿಟಾಕಿಯ ಮೂಲಕ ಏಕಕಾಲಕ್ಕೆ ಎಲ್ಲ ಅಧಿಕಾರಿಗಳಿಗೆ ಸಂದೇಶ, ಸೂಚನೆ ರವಾನಿಸಲು ಸಾಧ್ಯವಾಗುತ್ತದೆ. ಕೆಲಸದ ಅವಧಿಯಲ್ಲಿ ಎಲ್ಲ ಅಧಿಕಾರಿಗಳು ವಾಕಿಟಾಕಿಯನ್ನು ಚಾಲೂ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಕಡ್ಡಾಯ.
Related Articles
ವಾಕಿಟಾಕಿಯ ನೆಟ್ವರ್ಕ್ ವಲಯವನ್ನು ಪಾಲಿಕೆ ವ್ಯಾಪ್ತಿಗೆ ನಿಗದಿ ಮಾಡಲಾಗಿದೆ. ಲಾಲ್‌ಬಾಗ್‌ನಲ್ಲಿರುವ ಪಾಲಿಕೆಯ ಮುಖ್ಯ ಕಚೇರಿಯಿಂದ ತುಂಬೆವರೆಗೆ ಮತ್ತು ಮುಖ್ಯ ಕಚೇರಿಯಿಂದ ಸುರತ್ಕಲ್ ವಿಭಾಗ, ಮುಕ್ಕ ಬಾರ್ಡರ್‌ವರೆಗೂ ವಾಕಿ ಟಾಕಿಯ ರೇಂಜ್ ನಿಗದಿಯಾಗಿದೆ. ಪಾಲಿಕೆಯಲ್ಲಿ ಕೆಲವು ವರ್ಷಗಳ ಹಿಂದೆಯೂ ಇದೇ ರೀತಿ ವಾಕಿ ಟಾಕಿ ವ್ಯವಸ್ಥೆ ಅಳವಡಿಸಿದ್ದು, ಬಳಿಕ ಅದನ್ನು ಕೈ ಬಿಡಲಾಗಿತ್ತು.
Advertisement
ತತ್‌ಕ್ಷಣ ಸ್ಪಂದಿಸಿ ಕ್ಷಿಪ್ರ ಕೆಲಸವಾಕಿಟಾಕಿ ವ್ಯವಸ್ಥೆಯನ್ನು ಪಾಲಿಕೆಯಲ್ಲಿ ಅಳವಡಿಸಿ ಸುಮಾರು ಒಂದು ತಿಂಗಳಾಗಿದೆ. ಈ ವೇಳೆಯಲ್ಲಿ ಪಾಲಿಕೆಯ ಬಹುತೇಕ ಕೆಲಸ ಕಾರ್ಯಗಳು ವೇಗ ಪಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅಧಿಕಾರಿಗಳೂ ತತ್‌ಕ್ಷಣ ಸ್ಪಂದಿಸಿ ಕ್ಷಿಪ್ರ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಆದರೆ ಇದರಿಂದ ತತ್‌ಕ್ಷಣಕ್ಕೇ ಕೆಲಸಗಳಲ್ಲಿ ಶೇ.100ರಷ್ಟು ಯಶಸ್ಸು ಪಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ಕ್ರಮೇಣ ಇನ್ನಷ್ಟು ಫಲಿತಾಂಶ ಸಿಗಬಹುದು.
- ಸಂತೋಷ್, ಉಪ ಆಯುಕ್ತರು, ಮಹಾನಗರ ಪಾಲಿಕೆ - ಧನ್ಯಾ ಬಾಳೆಕಜೆ