Advertisement

ಟ್ರೇಡ್‌ ಲೈಸನ್ಸ್‌ ವ್ಯವಸ್ಥೆ ಸರಳೀಕರಣ

03:59 PM Oct 18, 2022 | Team Udayavani |

ಮೈಸೂರು: ಆನ್ಲೈನ್‌ ಮೂಲಕ ವ್ಯಾಪಾರಸ್ಥರು ಟ್ರೇಡ್‌ ಲೈಸನ್ಸ್‌ ಪಡೆಯಲು ಹಾಗೂ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮೇಯರ್‌ ಶಿವಕುಮಾರ್‌ ಹೇಳಿದರು.

Advertisement

ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ಸೋಮ ವಾರ ಟ್ರೇಡ್‌ ಲೈಸನ್ಸ್‌ ಮೂಲಕ ಆನ್‌ಲೈನ್‌ ವ್ಯವಸ್ಥೆ ಸರಳೀಕರಣಗೊಳಿಸಿರುವ ಬಗ್ಗೆ ವ್ಯಾಪಾರಸ್ಥರ ಸಂಘ ಟನೆಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಮೈಸೂರು ನಗರದಲ್ಲಿ ವ್ಯಾಪಾರಸ್ಥರಿಗೆ ಟ್ರೆಡ್‌ ಲೈಸನ್ಸ್‌ ಪಡೆಯಲು ಇದ್ದ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ಇನ್ನೂ ಮುಂದೆ ವ್ಯಾಪಾರಸ್ಥರು, ಪಾಲಿಕೆ ಕಚೇರಿಗೆ ಬರದೇ ತಾವಿರುವ ಸ್ಥಳದಲ್ಲಿಯೇ ತಮ್ಮ ಟ್ರೇಡ್‌ ಲೈಸನ್ಸ್‌ ಸಂಖ್ಯೆ ನಮೂದಿಸಿ, ತೆರಿಗೆ ಪಾವತಿಸ ಬಹುದು. ಪಾವತಿಯ ರಸೀದಿಯ ಪ್ರಿಂಟ್‌ ಕೂಡ ಪಡೆಯಬಹುದಾಗಿದೆ ಎಂದು ಹೇಳಿದರು.

19 ಸಾವಿರ ಟ್ರೆಡ್‌ ಲೈಸನ್ಸ್‌: ಮೈಸೂರು ನಗರದಲ್ಲಿ 19 ಸಾವಿರ ಮಂದಿ ಟ್ರೆಡ್‌ ಲೈಸನ್ಸ್‌ದಾರರು ಅನ್ನು ಗುರುತಿಸಲಾಗಿದ್ದು, 10500 ಮಂದಿ ವ್ಯಾಪಾರಸ್ಥರನ್ನು ಆನ್‌ಲೈನ್‌ ತೆರಿಗೆ ಪಾವತಿ ವ್ಯವಸ್ಥೆಗೆ ಅಪ್‌ಲೋಡ್‌ ಮಾಡಲಾಗಿದ್ದು, ಉಳಿದವುಗಳನ್ನು ಸಹ ಅಪ್‌ ಲೋಡ್‌ ಮಾಡಲಾಗುವುದು. ಬಳಿಕ ಸಭೆಯಲ್ಲಿದ್ದ ವ್ಯಾಪಾರಸ್ಥರು ಸೇರಿದಂತೆ ನಾನಾ ಸಂಘಟನೆಗಳ ಪ್ರತಿನಿಧಿಗಳಿಗೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಯ ಪ್ರತಿಯನ್ನು ಸಭೆಯಲ್ಲಿ ನೀಡಿ, ಪರವಾನಗಿ ಶುಲ್ಕ ಪಾವತಿಸಲು ಅನುಕೂಲ ವಾಗಲು ತೆರಿಗೆ ಪಾವತಿಯ ವ್ಯವಸ್ಥೆಯ ಸರಳೀಕರಣ ಗೊಳಿಸಿರುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಲೋಪದೋಷ ಸರಿಪಡಿಸಬೇಕು: ಈ ವೇಳೆ ಮೈಸೂರು ಟ್ರೆಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಪ್ರಶಾಂತ್‌ ಗೌಡ ಮಾತನಾಡಿ, ಟ್ರೆಡ್‌ ಲೈಸನ್ಸ್‌ ಶುಲ್ಕವನ್ನು ಯಾವ ಮಾನದಂಡ ಮೇಲೆ ನಿಗದಿಪಡಿಸಲಾಗಿದೆ ಎಂಬುದನ್ನು ತಿಳಿಸುವ ಮೂಲಕ ಆಗಿರುವ ಲೋಪದೋಷ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಉಪಮೇಯರ್‌ ಡಾ. ರೂಪಾ ಯೋಗೇಶ್‌, ಮಾಜಿ ಮೇಯರ್‌ ಅಯೂಬ್‌ ಖಾನ್‌, ಪಾಲಿಕೆ ಸದಸ್ಯೆ ಅಶ್ವಿ‌ನಿ ಅನಂತು, ಆಯುಕ್ತ ಜಿ.ಲಕ್ಷ್ಮೀ ಕಾಂತ್‌ ರೆಡ್ಡಿ, ಆರೋಗ್ಯಾಧಿಕಾರಿ ಡಾ.ನಾಗ ರಾಜು, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್‌, ಮೈಸೂರು ಟ್ರೆಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಪ್ರಶಾಂತ್‌ ಗೌಡ, ಮೈಸೂರು ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಸತ್ಯ ನಾರಾಯಣ್‌ ಸೇರಿದಂತೆ ನಾನಾ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

ಸಿಆರ್‌ ಪಡೆಯದ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಹೆಚ್ಚುವರಿ ಶುಲ್ಕ ವಿಧಿಸವುದನ್ನು ಸರಿಪಡಿಸುವ ಮೂಲಕ ವ್ಯಾಪಾರಸ್ಥರ ಹೊರೆ ಕಡಿಮೆ ಮಾಡಬೇಕು. – ನಾರಾಯಣ ಗೌಡ, ಅಧ್ಯಕ್ಷರು, ಮೈಸೂರು ಹೊಟೇಲ್‌ ಮಾಲೀಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next