Advertisement

ಬೊಜ್ಜು ಕರಗಿಸಲು ಸರಳ ಮಾರ್ಗಗಳು

11:12 PM Dec 30, 2019 | mahesh |

ಬೊಜ್ಜು ಇತ್ತೀಚೆಗೆ ಎಲ್ಲರಲ್ಲೂ ಕಂಡುಬರುವ ಸಾಮಾನ್ಯ ಸಮಸ್ಯೆ. ಸೂಕ್ತ ಆಹಾರ ಕ್ರಮ ಮತ್ತು ಅಗತ್ಯ ಸರಳ ವ್ಯಾಯಾಮಗಳನ್ನೂ ಮಾಡದಿರುವುದೇ ದೇಹದಲ್ಲಿ ಬೊಜ್ಜು ಸಂಗ್ರಹಗೊಳ್ಳಲು ಮುಖ್ಯ ಕಾರಣ. ಅನಗತ್ಯ ವೆಚ್ಚ ಮಾಡದೆ ಸರಳ ರೀತಿಯಲ್ಲಿ ಹೇಗೆ ಬೊಜ್ಜನ್ನು ಕರಗಿಸಬಹುದು ಎಂಬ ಕೆಲವು ಸಲಹೆಗಳು ಇಲ್ಲಿವೆ.

Advertisement

 ಬಿಸಿ ನೀರು ಮತ್ತು ಲಿಂಬೆ ರಸ
ತಾಜಾ ಲಿಂಬೆಯು ಕೆಲವು ಕಿಣ್ವಗಳನ್ನು ಹೊಂದಿರುವ ಕಾರಣ ಅದು ಪಿತ್ತಜನಕಾಂಗವನ್ನು ನಿರ್ವಿಷಗೊಳಿಸಲು ಸಹಾಯಮಾಡುವ ಜತೆಗೆ ಯಕೃತ್ತಿನ ಕೆಲಸ ಸುಗಮವಾಗಿ ನಡೆಯಲು ಸಹಕರಿಸುತ್ತದೆ. ಯಕೃತ್ತಿನಿಂದಲೇ ಕೊಬ್ಬು ಬಿಡುಗಡೆಯಾಗುವ ಕಾರಣ ಬೆಳಗ್ಗೆ ಎದ್ದವರೇ ಬಿಸಿ ನೀರಿಗೆ ಲಿಂಬೆ ರಸವನ್ನು ಸೇರಿಸಿ ಕುಡಿದರೆ ಕೊಬ್ಬನ್ನು ಕರಗಿಸಬಹುದು.

 ಜೇನುತುಪ್ಪ, ನಿಂಬೆರಸ, ಶುಂಠಿ ಬೆರೆಸಿದ ಚಹಾ ಸೇವನೆ
ಚಹಾಕ್ಕೆ ಜೇನುತುಪ್ಪ, ನಿಂಬೆರಸ, ಶುಂಠಿ ಬೆರೆಸಿ ಸೇವಿಸುವುದರಿಂದ ಕೊಬ್ಬನ್ನು ಕರಗಿಸಬಹುದು. ಇದು ಜೀರ್ಣಕ್ರಿಯೆಗೆ ಸಹಕರಿಸುವ ಕಿಣ್ವಗಳನ್ನು ಉತ್ಪಾದನೆ ಮಾಡುತ್ತದೆ. ಶುಂಠಿ ಥರ್ಮೋಜೆನಿಕ್‌ ಏಜೆಂಟ್‌ ಆಗಿರುವುದರಿಂದ ದೇಹದ ಉಷ್ಣಾಂಶ ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

 ಮೆಂತೆ ಸೇವನೆ
ನೀವು ಬಳಸುವ ಆಹಾರ ಪದಾರ್ಥಗಳ ಜತೆ ಜಾಸ್ತಿ ಮೆಂತೆಯನ್ನು ಸೇವಿಸಿ. ಇದು ಕಹಿಯಾದರೂ ದೇಹದ ಕೊಬ್ಬು ಕರಗಿಸಲು ಸಹಕಾರಿ. ಮೆಂತೆಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದ್ದು, ಕಾಬ್ಸ್ì ಮತ್ತು ಕೊಲೆಸ್ಟ್ರಾಲ್‌ ಅಂಶ ಕಡಿಮೆ ಇದೆ. ವಿಶೇಷವಾಗಿ ಮೆಂತೆ ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಹೆಚ್ಚು ಸಹಕಾರಿ.

 ಬೆಳ್ಳುಳ್ಳಿ ಲಿಂಬೆರಸ ಸೇವನೆ
ಒಂದು ಕಪ್‌ ನೀರಿಗೆ ಲಿಂಬೆರಸ ಬೆರೆಸಿ ಅದರೊಡನೆ ಹಸಿ ಬೆಳ್ಳುಳ್ಳಿ ಸೇವಿಸಿ. ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಈ ಕ್ರಮ ಮಾಡುವುದರಿಂದ ಶೀಘ್ರ ಅನಗತ್ಯ ಬೊಜ್ಜನ್ನು ಕರಗಿಸಬಹುದು.

Advertisement

 ದಾಲ್ಚಿನಿ ಬಳಕೆ
ಅಡುಗೆಯಲ್ಲಿ ಕೊಂಚ ಖಾರವಾಗಿರುವ ದಾಲಿcನಿಯ ಬಳಕೆಯಿಂದ ರುಚಿ ಮಾತ್ರ ಹೆಚ್ಚಳವಾಗುವುದಿಲ್ಲ. ಬದಲಾಗಿ ದೇಹದ ಕೊಬ್ಬೂ ಕರಗುತ್ತದೆ. ದಾಲ್ಚಿನಿಯ ಸೇವನೆಯಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದರಿಂದ ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.

  ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next