ಚನ್ನಮ್ಮ ಕಿತ್ತೂರು: ಕಿತ್ತೂರು ರಾಣಿ ಚನ್ನಮ್ಮ ಉತ್ಸವದಂಗವಾಗಿ ಬೈಲಹೊಂಗಲದ ರಾಣಿ ಚನ್ನಮ್ಮಾಜಿ ಸಮಾಧಿ ಸ್ಥಳದಿಂದ ಆಗಮಿಸಿದ್ದ ವಿಜಯಜ್ಯೋತಿಯನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಕಿತ್ತೂರುಶಾಸಕ ಮಹಾಂತೇಶ ದೊಡಗೌಡರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ,ಬೈಲೂರು ನಿಷ್ಕಲ ಮಂಟಪ ನಿಜಗುಣಾನಂದ ಸ್ವಾಮೀಜಿ, ರಾಜಗುರು ಸಂಸ್ಥಾನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಅದ್ದೂರಿ ಸ್ವಾಗತ ಕೋರಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೈಘೋಷಗಳು ಮುಗಿಲು ಮುಟ್ಟಿದವು.
ನಂತರ ಚನ್ನಮ್ಮಾಜಿ ಪುತ್ಥಳಿ ಹಾಗೂ ವೀರ ಸೇನಾನಿಗಳಾದ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪನ ಕಂಚಿನ ಪ್ರತಿಮೆಗೆಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಜ್ಯೋತಿ ಮೆರವಣಿಗೆ ಮೂಲಕ ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಸನ್ನಿ ಗೆ ತಲುಪಿ ಪೂಜೆ ಸಲ್ಲಿಸಿ. ಮರಳಿ ಕೋಟೆ ಆವರಣಕ್ಕೆ ಜ್ಯೋತಿ ಆಗಮಿಸಿತು.
ಇದಕ್ಕೂ ಮೊದಲು ಕಿತ್ತೂರು ಸಂಸ್ಥಾನದ ನಂದಿ ಧ್ವಜಾರೊಹಣವನ್ನು ಶಾಸಕ ಮಹಾಂತೇಶ ದೊಡಗೌಡರ ಗಣ್ಯರ ಮತ್ತು ವಿವಿಧ ಮಠಾಧೀಶರ ಸಮ್ಮುಖದಲ್ಲಿ ನೆರವೇರಿಸಿದರು. ಬೈಲಹೊಂಗಲ ಎ.ಸಿ ಶಿವಾನಂದ ಭಜಂತ್ರಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಸದಸ್ಯೆ ರಾಧಾ ಕಾದ್ರೋಳಿ, ತಹಶೀಲ್ದಾರ ಪ್ರವೀಣ ಜೈನ, ತಾಪಂ ಇಓ ಸುಭಾಸ ಸಂಪಗಾವಿ, ಸಿಪಿ.ಐ ಮಂಜುನಾಥ ಕುಸಗಲ್, ಕಿತ್ತೂರು ತಾಪಂ ಅಧ್ಯಕ್ಷೆ ಚನ್ನಮ್ಮಾ ಹೊಸಮನಿ, ಬೈಲಹೊಂಗಲ ತಾಪಂ ಅಧ್ಯಕ್ಷೆ ಪಾರ್ವತಿ ನರೇಂದ್ರ, ಬಿಜೆಪಿಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಜಗದೀಶ ವಸ್ತ್ರದ, ಚಿನ್ನಪ್ಪ ಮುತ್ನಾಳ, ಅಪ್ಪಣ್ಣ ಪಾಗಾದ, ಎಸ್.ಆರ್.ಪಾಟೀಲ, ಬಸನಗೌಡ ಸಿದ್ರಾಮನಿ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೆಗಡ್ಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಚನ್ನಮ್ಮಾಜಿ ಆದರ್ಶ ಮೈಗೂಡಿಸಿಕೊಳ್ಳಿ :
ಬೈಲಹೊಂಗಲ: ವೀರ ರಾಣಿ ಕಿತ್ತೂರ ಚನ್ನಮ್ಮನ ಚರಿತ್ರೆ ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಶುಕ್ರವಾರ ಕಿತ್ತೂರು ಉತ್ಸವ ಅಂಗವಾಗಿ ಪಟ್ಟಣದ ಚನ್ನಮ್ಮಾ ಸಮಾಧಿ ರಸ್ತೆಯಲ್ಲಿ ವಿಜಯ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಸಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಚನ್ನಮ್ಮನ ಆದರ್ಶ, ತತ್ವಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕೆಂದರು. ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ, ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜೇರ ಮಾತನಾಡಿದರು. ಶಾಖಾ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಹರಿಹರದ ವಚನನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ್ ಡಾ.ದೊಡ್ಡಪ್ಪಹೂಗಾರ, ಪಿಎಸ್‌ಐ ಈರಪ್ಪ ರೀತ್ತಿ, ಪುರಸಭೆ ಮುಖ್ಯಾಧಿಕಾರಿ ಕೆ.ಐ.ನಾಗನೂರ, ತಾಪಂ.ಇಓ ಸುಭಾಷ ಸಂಪಗಾಂವಿ, ಸತ್ಯಪ್ಪ ಭರಮನ್ನವರ, ಸಿಡಿಪಿಓ ಮಹಾಂತೇಶಭಜಂತ್ರಿ, ತಾಪಂ.ಅಧ್ಯಕ್ಷೆ ಚನ್ನವ್ವ ಹೊಸಮನಿ ಹಾಗೂ ಕಂದಾಯ, ಪುರಸಭೆ ಸಿಬ್ಬಂದಿ ಇದ್ದರು. ಜ್ಯೋತಿ ಯಾತ್ರೆಯು ರಾಯಣ್ಣ ಸರ್ಕಲ್, ಚನ್ನಮ್ಮ ವೃತ್ತ ಆನಿಗೋಳ, ಸಂಗೊಳ್ಳಿ ಮಾರ್ಗವಾಗಿ ಕಿತ್ತೂರು ತಲುಪಿತು.