Advertisement

ಎಸ್‌ಬಿಆರ್‌ ಕಾಲೇಜಿನಲ್ಲಿ ಸಿಂಪಿ ಮತಯಾಚನೆ

10:22 AM Nov 12, 2021 | Team Udayavani |

ಕಲಬುರಗಿ: ಸಾಹಿತ್ಯ ಸೇವೆಗೆ ಜೀವನ ಪರ್ಯಂತ ಶ್ರಮಿಸುತ್ತಾ ಬಂದಿರುವುದು ಸಾಕಷ್ಟು ಅನುಭವ ನೀಡಿದೆ. ಇದೇ ಸೇವಾ ಹಿರಿತನ ಮತ್ತಷ್ಟು ಕಾರ್ಯಗಳಿಗೆ ಸ್ಫೂರ್ತಿ ನೀಡಿದೆ ಎಂದು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಭದ್ರ ಸಿಂಪಿ ಹೇಳಿದರು.

Advertisement

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್‌ಬಿಆರ್‌ ಶಾಲಾ-ಕಾಲೇಜುಗಳಲ್ಲಿ ಮತದಾರರ ಶಿಕ್ಷಕರು ಹಾಗೂ ಮತದಾರರನ್ನು ಭೇಟಿಯಾಗಿ ಮತಯಾಚಿಸಿದ ಅವರು, ತಾವಂತು ಈಗ ನಿವೃತ್ತಿಯಾಗಿದ್ದು, ಹಗಲಿರಳು ಕನ್ನಡ ಹಾಗೂ ಸಾಹಿತ್ಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ತಮ್ಮ ಅವಧಿಯಲ್ಲಂತೂ ಅಖೀಲ ಭಾರತ ಸಾಹಿತ್ಯ ಸಮ್ಮೇಳನ, ಸಮ್ಮೇಳನಾಧ್ಯಕ್ಷತೆ ತಂದಿರುವುದು ಸೇರಿದಂತೆ ಇತರ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಎಲ್ಲ ಮತದಾರರಿಗೆ ಸಂಪೂರ್ಣ ಅರಿವಿದೆ. ತಮ್ಮ ಸೇವಾ ಸಾಧನೆ ಗುರುತಿಸಿ ಹಾಗೂ ಮತ್ತಷ್ಟು ಹೊಸ-ಹೊಸ ಯೋಜನೆಗಳನ್ನು ಕೈಗೊಳ್ಳಲು ಜತೆಗೆ ಬಾಪುಗೌಡ ದರ್ಶನಾಪುರ ರಂಗ ಮಂದಿರ ಸುಂದರವಾಗಿ ಅಭಿವೃದ್ಧಿಗೊಳ್ಳಲು ಪ್ರಮುಖವಾಗಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಗೆ ತರಲು ಮಗದೊಮ್ಮೆ ತಮಗೆ ಅವಕಾಶ ನೀಡಬೇಕೆಂದು ಸಿಂಪಿ ಕೋರಿದರು. ಈ ಸಂದರ್ಭದಲ್ಲಿ ದೌಲತರಾವ ಪಾಟೀಲ್‌ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next