Advertisement
ರಶ್ಯದ ಪಾವು ಚೆಂಕೋವಾ ವಿರುದ್ಧದ ಮಳೆಬಾಧಿತ ಸುದೀರ್ಘ ಪಂದ್ಯವನ್ನು ಗೆದ್ದ ಕೆಲವೇ ಗಂಟೆಗಳಲ್ಲಿ ಸಿಮೋನಾ ಹಾಲೆಪ್ ಪ್ರಿ-ಕ್ವಾರ್ಟರ್ ಫೈನಲ್ ಆಡಲಿಳಿ ದಿದ್ದರು. ಹಾಲೆಪ್ ಅವರ ಎಂಟರ ಸುತ್ತಿನ ಎದುರಾಳಿ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ. ಅವರು ಮರಿಯಾ ಶರಪೋವಾಗೆ 6-3, 6-2 ಅಂತರದ ಸೋಲುಣಿಸಿದರು. ಕಳೆದ ವರ್ಷವೂ ಹಾಲೆಪ್-ಗಾರ್ಸಿಯಾ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಿದ್ದರು. ಇದರಲ್ಲಿ ಹಾಲೆಪ್‌ಗೆ ಗೆಲುವು ಒಲಿದಿತ್ತು.
ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ವಿರುದ್ಧ 6-2, 7-5 ಅಂತರದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವತ್ಸೋವಾ. ಅವರು ಜರ್ಮನಿಯ ಜೂಲಿಯಾ ಜಾರ್ಜಸ್ ವಿರುದ್ಧ 6-3, 7-6 (7-2) ಅಂತರದಿಂದ ಗೆದ್ದು ಬಂದರು. ಫ್ರಾನ್ಸ್‌ನ ಅಲಿಜೆ ಕಾರ್ನೆಟ್ ವಿರುದ್ಧ 7-6 (7-3), 6-4 ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರ ಎದುರಾಳಿ ಹಾಲೆಂಡ್‌ನ ಕಿಕಿ ಬರ್ಟೆನ್ಸ್. ಇನ್ನೊಂದು ಮುಖಾ ಮುಖೀಯಲ್ಲಿ ಬರ್ಟೆನ್ಸ್ 6-3, 6-2ರಿಂದ ಪೆಟ್ರಾ ಕ್ವಿಟೋವಾಗೆ ಸೋಲಿನೇಟು ನೀಡಿದರು.ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು ಮಣಿಸಿ ಟೆನಿಸ್ ಬಾಳ್ವೆಯ ದೊಡ್ಡ ಗೆಲುವು ಸಾಧಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್‌ಗೆ ಶರಣಾಗಿದ್ದಾರೆ.
Related Articles
Advertisement