Advertisement
ದತ್ತಾಂಶಗಳಲ್ಲಿ ಲೋಪ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕುಗಳಿಗೆ ಆರ್‌ಬಿಐ ಷೋಕಾಸ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಇಂಥದ್ದೊಂದು ಅನುಮಾನ ಮೂಡಿದೆ.ಹೊಸ ನಿಯಮ ಜಾರಿಯಾದರೆ, ಟ್ರಾನ್ಸ್ ಯೂನಿಯನ್, ಸಿಬಿಲ್, ಈಕ್ವಿಫ್ಯಾಕ್ಸ್, ಸಿಆರ್‌ಐಎಫ್ ಹೈ ಮಾರ್ಕ್, ಎಕ್ಸ್‌ಪೀರಿಯನ್ ಮುಂತಾದ ಎಲ್ಲ ಸಾಲ ಮಾಹಿತಿ ಕಂಪನಿಗಳು ಗ್ರಾಹಕರ ಸಾಲದ ದತ್ತಾಂಶಗಳನ್ನು ಒಂದೇ ನಮೂನೆಯಲ್ಲಿ ಸಲ್ಲಿಸಬೇಕಾಗುತ್ತದೆ. ಇದರಿಂದ, ಗ್ರಾಹಕರ ಕ್ರೆಡಿಟ್ ಸ್ಕೋರ್‌ನಲ್ಲಿ ವಿವರಿಸಲಾಗದಂಥ ವ್ಯತ್ಯಾಸ, ಸಾಲ ಪಾವತಿ ಪೂರ್ಣಗೊಂಡ ಬಗ್ಗೆ ಮಾಹಿತಿ ಅಪ್‌ಡೇಟ್ ಮಾಡುವಲ್ಲಿ ವಿಳಂಬ, ತಿದ್ದುಪಡಿ ಕೋರಿಕೆಗೆ ಸ್ಪಂದಿಸದೇ ಇರುವುದು, ಗ್ರಾಹಕರ ಮಾಹಿತಿ ಕಳವು ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಪ್ರಸ್ತುತ ಪ್ರತಿ ಕ್ರೆಡಿಟ್ ಇನಾ#ರ್ಮೇಷನ್ ಕಂಪನಿಯೂ ತನ್ನದೇ ಆದ ನಮೂನೆಯಲ್ಲಿ ಗ್ರಾಹಕರ ದತ್ತಾಂಶ ಸಂಗ್ರಹಿಸಿ, ಸಲ್ಲಿಸುತ್ತದೆ. ಹಲವು ಬಾರಿ ದತ್ತಾಂಶಗಳಲ್ಲಿ ವ್ಯತ್ಯಾಸ, ಲೋಪ ಕಂಡುಬರುವ ಕಾರಣ, ನಮಗೆ ಸಾಲ ಸಿಗುತ್ತಿಲ್ಲ ಮತ್ತು ಸಾಲದ ಮಿತಿಯೂ ಇಳಿಕೆಯಾಗುತ್ತಿದೆ ಎಂದು ಅನೇಕ ಗ್ರಾಹಕರು ದೂರು ನೀಡುತ್ತಿದ್ದಾರೆ. ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ?
– ಕ್ರೆಡಿಟ್ ಸ್ಕೋರ್‌ನಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ
– ಸಾಲ ಪಾವತಿ ಪೂರ್ಣಗೊಂಡ ಮಾಹಿತಿ ಅಪ್‌ಡೇಟ್ ಮಾಡುವಲ್ಲಿ ವಿಳಂಬ
– ತಿದ್ದುಪಡಿ ಕೋರಿಕೆಗೆ ಸ್ಪಂದಿಸದೇ ಇರುವುದು
– ಗ್ರಾಹಕರ ಮಾಹಿತಿ ಕಳವು