Advertisement
ಮಂಗಳೂರು: ನವೆಂಬರ್ ತಿಂಗಳ 4, 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಲಿರುವ 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಲಯದ ಉದ್ಘಾಟಣೆ ಮತ್ತು ಸ್ವಾಗತ ಸಮಿತಿಯ ಪ್ರಥಮ ಸಭೆ ಬೆಂದೂರ್‌ವೆಲ್ ನ ಶ್ರೀ ಟಾಯ್ಟಸ್ ನೊರೊನ್ಹಾ ಅವರ ರಾಹುಲ್ ಎಡ್ವರ್ಟೈರರ್ಸ್ ಕಚೇರಿಯಲ್ಲಿ ನಡೆಯಿತು.
Related Articles
Advertisement
ಸಾಹಿತ್ಯ ಅಕಾಡೆಮಿ, ನವ ದೆಹಲಿ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕೊಂಕಣಿ ಭಾಷಾ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಮಂಗಳೂರಿನಲ್ಲಿ ಸುಮಾರು ಮೂರು ದಶಕಗಳ ಹಿಂದೆ ನಡೆದ ಪರಿಷತ್ತಿನ ಅಧಿವೇಶನವನ್ನು ಸ್ಮರಿಸಿ, ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ರಜತ ಸಮ್ಮೇಳನವನ್ನು ಸ್ಮರಣಾರ್ಹ ಮಾಡುವ ನಿಟ್ಟಿನಲ್ಲಿ ಕೊಂಕಣಿಗಾಗಿ ಶ್ರಮಿಸುವ ಸಂಘ ಸಂಸ್ಥೆಗಳ ಸಹಕಾರ ಕೋರಿದರು.
ಕಾರ್ಯಕ್ರಮಕ್ಕೆ ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳ್‌ಕರ್, ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗ ಮುಖ್ಯಸ್ಥೆ ಪ್ರೊ| ಪ್ಲೋರಾ ಕಾಸ್ತೆಲಿನೊ, ಖ್ಯಾತ ನಿರೂಪಕಿ ಸುಚಿತ್ರಾ ಎಸ್. ಶೆಣೈ, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೇಂಕಟೇಶ ನಾಯಕ್, ರಾಕ್ಣೊ ಪತ್ರಿಕೆಯ ಸಂಪಾದಕ ವಂ| ರೂಪೇಶ್ ಮಾಡ್ತಾ, ಉಜ್ವಾಡ್ ಪತ್ರಿಕೆಯ ಸಂಪಾದಕ ವಂ| ಆಲ್ವಿನ್ ಕಾರ್ಮೆಲಿತ್, ಕೊಂಕಣಿ ನಾಟಕ ಸಭಾದ ಫ್ಲೋಯ್ಡ್ ಕಾಸ್ಸಿಯಾ, ಜೆರಾಲ್ದ್ ಕೊನ್ಸೆಸೊ, ಆಕಾರ್ ಸಂಸ್ಥೆಯ ದಯಾ ವಿಕ್ಟರ್ ಲೋಬೊ, ಸಾಹಿತಿ ವಿನ್ಸೆಂಟ್ ಪಿಂಟೊ, ಆಂಜೆಲೋರ್ ಮತ್ತಿತರ ಗಣ್ಯರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಸಾಹಿತ್ಯ ಅಕಾಡೆಮಿ, ನವದೆಹಲಿ ಕೊಂಕಣಿ ಭಾಷಾ ಸಲಹಾ ಸಮಿತಿ ಸದಸ್ಯ ಮತ್ತು ಪತ್ರಕರ್ತ ಎಚ್ಚೆಮ್, ಪೆರ್ನಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.