Advertisement
ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಹಾಗೂ ಸರಕಾರದ ಮಹತ್ವಾಕಾಂಕ್ಷೆಯ ಅಗ್ನಿ ಪಥ್ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ , ಕಾರ್ಕಳದ ಭುವನೇಂದ್ರ ಕಾಲೇಜು ನಿಂದ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದ ವರೆಗೆ ನಡೆಯುವ ಅಗ್ನಿದೌಡ್ 75 ಕಿಮೀ ಓಟ ಕ್ಕೆ ಭುವನೇಂದ್ರ ಕಾಲೇಜು ಮುಂಭಾಗ ಅವರು ಚಾಲನೆ ನೀಡಿ ಮಾತನಾಡಿದರು.ಅಗ್ನಿಪಥ್ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದೆ. ಭವಿಷ್ಯದ ಭಾರತ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮುಖ್ಯ. ಆ ದೃಷ್ಟಿಯಿಂದ ಯುವ ಶಕ್ತಿಗೆ ಶಕ್ತಿ ತುಂಬುವ ಕಾರ್ಯ ಈ ಸುಸಂದರ್ಭದಲ್ಲಿ ನಡೆಸಲಾಗುತ್ತಿದೆ ಎಂದರು.
ಕಾರ್ಕಳದಿಂದ ಆರಂಭಗೊಂಡ ಮ್ಯಾರಥಾನ್ ಓಟದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು. ಮ್ಯಾರಥಾನ್ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಬೆಳ್ಮಣ್ ಮೂಲಕ ಕಾಪು ತಲುಪಿ ಬಳಿಕ ಉಡುಪಿ ಸೇರಲಿದೆ. ಕಾರ್ಕಳದಿಂದ ಹೊರಟ ಮ್ಯಾರಥಾನ್ ಓಟದ ಸಂದರ್ಭ ಅಲ್ಲಲ್ಲಿ ಆಕರ್ಷಕ ಚೆಂಡೆ ನಿನಾದದೊಂದಿಗೆ ಓಟಗಾರರನ್ನು ಸ್ವಾಗತಿಸಲಾಗಿತ್ತು. ತಂಡ ತಂಡವಾಗಿ ಮ್ಯಾರಥಾನ್ ಓಟ 75 ಕಿ.ಮೀ ಕ್ರಮಿಸಲಿದೆ.