Advertisement

ಅಯೋಧ್ಯೆ ಶ್ರೀರಾಮನಿಗೆ ಶಿಯಾ ಮಂಡಳಿ ಬೆಳ್ಳಿ ಬಾಣ

06:25 AM Oct 18, 2017 | Harsha Rao |

ಲಕ್ನೋ: ವಿವಾದದ ಕೇಂದ್ರಬಿಂದು ವಾಗಿ ಗಮನ ಸೆಳೆದಿದ್ದ ಅಯೋಧ್ಯೆ ಈಗ ಅಚ್ಚರಿಯ ಸಾಮರಸ್ಯದ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಸರಯೂ ನದಿ ತೀರದಲ್ಲಿ ಉತ್ತರಪ್ರದೇಶ ಸರಕಾರವು ನಿರ್ಮಿ ಸಲು ಉದ್ದೇಶಿಸಿರುವ 100 ಮೀಟರ್‌ ಎತ್ತರದ ಶ್ರೀರಾಮನ ವಿಗ್ರಹಕ್ಕೆ ಗೌರವದದ್ಯೋತಕವಾಗಿ 10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡುವುದಾಗಿ ಶಿಯಾ ಸೆಂಟ್ರಲ್‌ ವಕ್ಫ್ ಬೋರ್ಡ್‌ ಘೋಷಿಸಿದೆ.

Advertisement

ಸರಯೂ ನದಿ ತೀರದಲ್ಲಿ ರಾಮನ ವಿಗ್ರಹ ಸ್ಥಾಪಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಶಿಯಾ ಮಂಡಳಿ, “ಈ ನಿರ್ಧಾರ ಪ್ರಶ್ನಾತೀತ. ನಾವು ಆ ವಿಗ್ರಹಕ್ಕೆ ಬೆಳ್ಳಿಯ ಬಾಣಗಳನ್ನು ನೀಡುತ್ತಿದ್ದೇವೆ. ಇದು ಶಿಯಾ ಸಮುದಾಯಕ್ಕೆ ಶ್ರೀರಾಮನ ಬಗ್ಗೆ ಇರುವ ಗೌರವದ ದ್ಯೋತಕ’ ಎಂದಿದೆ. 

ಈ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿರುವ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ, “ಶ್ರೀರಾಮನ ವಿಗ್ರಹ ಸ್ಥಾಪಿಸುವುದರಿಂದ ಉತ್ತರಪ್ರದೇಶವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ‌. ಈ ಭಾಗದ ನವಾಬರು ಯಾವಾಗಲೂ ಅಯೋಧ್ಯೆಯ ದೇವಸ್ಥಾನಗಳನ್ನು ಗೌರವಿಸುತ್ತಿದ್ದರು. ಹನುಮಾನ್‌ ಗಹಿìಗೆ ಇಲ್ಲಿ  ಭೂಮಿ ನೀಡಿದ್ದೂ ನವಾಬ್‌ ಶುಜಾ-ಉದ್‌-ದೌಲಾ ಅವರೇ’ ಎಂದಿದ್ದಾರೆ. 

ಶ್ರೀರಾಮನ ವಿಗ್ರಹ  ನಿರ್ಮಾಣ ಪ್ರಸ್ತಾವ ವನ್ನು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಜಿಲಾನಿ  ಮತ್ತು ಎಐಎಂಐಎಂ  ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ವಿರೋಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next