ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿರುವ ಗೋಮುಖ ರಾಯರ ಮಠದಲ್ಲಿ ಪ್ರಥಮ ವರ್ಧಂತ್ಯುತ್ಸವ ನಿಮಿತ್ತ ಹನುಮಂತ ದೇವರಿಗೆ ಹಾಗೂ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಕ್ಕೆ ಬೆಳ್ಳಿ ಕವಚ ಸಮರ್ಪಣೆ ಹಾಗೂ ಅದ್ಧೂರಿಯಾಗಿ ಜರುಗಿತು.
ಪಂ. ರಾಮಾಚಾರ್ಯ ಅವಧಾನಿ ನೇತೃತ್ವದಲ್ಲಿ ಗುರುವಾರ ವೃತ್ತಿಕಾ ವೃಂದಾವನದ ಪ್ರಥಮ ವರ್ಧಂತ್ಯುತ್ಸವ ಮತ್ತು ಬೆಳ್ಳಿ ಕವಚ ಸಮರ್ಪಣೆ ಕಾರ್ಯ ನಡೆಯಿತು.
ಬೆಳಗ್ಗೆ ರಾಯರ ವೃಂದಾವನಕ್ಕೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ವೃಂದಾವನ ಮತ್ತು ವಾಯು ದೇವರಿಗೆ ಬೆಳ್ಳಿ ಕವಚ ಸಮರ್ಪಿಸಲಾಯಿತು. ಪೂರ್ಣಪ್ರಜ್ಞ ಪಾರಾಯಣ ಸಂಘದಿಂದ ಅಷ್ಟೋತ್ತರ ನಡೆಯಿತು. ಮಠದ ಆವರಣದಲ್ಲಿ ಅದ್ಧೂರಿಯಾಗಿ ಪಲ್ಲಕ್ಕಿ ಉತ್ಸವ ನೆರವೇರಿತು.
ಗುರುರಾಜ ಸೇವಾ ಸಮಿತಿ, ಗುರುಸಾರ್ವಭೌಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು. ಪಂ.ವಿಷ್ಣುದಾಸಾಚಾರ್ಯ ಖಜೂರಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ.ವೆಂಕಣ್ಣಾಚಾರ ಮಳಖೇಡ, ಪಂ.ಶ್ರೀನಿವಾಸಾಚಾರ್ಯ ಪದಕಿ, ಉತ್ತರಾದಿ ಮಠದ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಲಕ್ಷ್ಮಣಾಚಾರ್ಯ, ಕೃಷ್ಣಾಜಿ ಕುಲಕರ್ಣಿ, ಡಾ|ಪ್ರಹ್ಲಾದ ಬುರ್ಲಿ, ವಾಸು ದೇವಾಚಾರ್ಯ ರಾಜಾಪುರೋಹಿತ, ಪ್ರಮುಖರಾದ ಅನಿಲ ಬಡದಾಳ, ನರಹರಿ ಪಾಟೀಲ, ಪವನ್ ಫಿರೋಜಾಬಾದ್, ರಾಘವೇಂದ್ರ ಕೋಗನೂರ, ಗೋಟೂರ ಹಣಮಂತಾರಾವ್, ಶಂಕರರಾವ್ ಕುಲಕರ್ಣಿ, ಪ್ರಮೋದ ದೇಸಾಯಿ, ನೀಲ ಲೋಹಿತ ಜೇವರ್ಗಿ, ಹಣಮಂತರಾವ ಜೇವರ್ಗಿ, ರಾಜೇಶ ಹನುಮ ಸಾಗರ, ಭೀಮಸೇನರಾವ್, ಮಹೇಶ ಮುದ್ಲಿಯರ ಮತ್ತಿತರರು ಇದ್ದರು.