Advertisement

Silk Smitha – Queen of the South; ಬರುತ್ತಿದೆ ಸಿಲ್ಕ್‌ ಸ್ಮಿತಾ ಬಯೋಪಿಕ್

01:23 PM Dec 03, 2024 | Team Udayavani |

ದಕ್ಷಿಣ ಭಾರತದ ನಟಿ ಹಾಗೂ ನೃತ್ಯಗಾರ್ತಿ ಸಿಲ್ಕ್ ಸ್ಮಿತಾ ಅವರ ಜೀವನ ಈಗ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ.

Advertisement

ಇತ್ತೀಚೆಗೆ ಅವರ ಜನ್ಮದಿನ ಹಿನ್ನೆಲೆ ಎಸ್‌ ಟಿಆರ್‌ಐ ಸಿನಿಮಾಸ್‌ ಸಂಸ್ಥೆ ಅವರ ಬಯೋಪಿಕ್‌ ಸಿನಿಮಾ ಮಾಡುವುದಾಗಿ ಘೋಷಿಸಿಕೊಂಡಿದೆ. ಸಿನಿಮಾದ ಶೀರ್ಷಿಕೆ ಕೂಡ ಅನಾವರಣಗೊಂಡಿದ್ದು, “ಸಿಲ್ಕ್ ಸ್ಮಿತಾ-ಕ್ವೀನ್‌ ಆಫ್ ದಿ ಸೌತ್‌’ ಎಂಬ ಹೆಸರಿಡಲಾಗಿದೆ.

ಅಮೃತ್‌ ರಾಜ್‌ ನಿರ್ಮಾಣದ ಈ ಚಿತ್ರಕ್ಕೆ ಜಯರಾಮ್‌ ಸಂಕರನ್‌ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಭಾರತ ಮೂಲದ ಆಸ್ಟ್ರೇಲಿಯಾ ನಟಿ ಚಂದ್ರಿಕಾ ರವಿ ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಅವರ ಪಾತ್ರ ನಿಭಾಯಿಸಲಿದ್ದಾರೆ. 2025ಕ್ಕೆ ಈ ಸಿನಿಮಾ ಸೆಟ್ಟೇರಲಿದೆ. ನಟಿ ಸಿಲ್ಕ್ ಸ್ಮಿತಾ 1980ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೊಸ ಸಂಚಲನ ಮೂಡಿಸಿದ್ದ ಈ ನಟಿ, ತಮ್ಮ 18 ವರ್ಷಗಳ ಸಿನಿ ಪಯಣದಲ್ಲಿ 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next