Advertisement
ತಾಲೂಕಿನ ಕಸಬಾ ಹಾಗೂ ಸಾತನೂರು ಹೋಬಳಿಯ ರೈತರ ರೇಷ್ಮೆ ಬೆಳೆಗೆ ಇತ್ತೀಚಿಗೆ ಕಂಬಳಿ ಹುಳುಗಳ ಬಾಧೆ ಹೆಚ್ಚಾಗಿರುವುದು ರೈತರ ಆತಂಕಕ್ಕೆಕಾರಣವಾಗಿತ್ತು. ಈ ಹಿನ್ನೆಲೆ ತೋಟಗಳಿಗೆಮೈಸೂರು ರೇಷ್ಮೆ ಸಂಶೋಧನಾ ಕೇಂದ್ರದಮೂವರು ವಿಜಾnನಿಗಳು, ರೇಷ್ಮೆ ಇಲಾಖೆ ಅಧಿಕಾರಿ ಗಳ ತಂಡ ಭೇಟಿ ನೀಡಿ ರೋಗ ನಿಯಂತ್ರ ಣದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
Related Articles
Advertisement
ಕೃಷಿ ಇಲಾಖೆ ನಿರ್ದೇಶನ ಕಡೆಗಣನೆ: ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತುರಾಜ್ ಮಾತನಾಡಿ, ರೈತರು ಅಧಿಕ ಲಾಭದ ಆಸೆಯಿಂದಇಲಾಖೆ ನಿರ್ದೇಶನ ಕಡೆಗಣಿಸುತ್ತಿದ್ದಾರೆ. ಇನ್ನೂರೇಷ್ಮೆ ಇಲಾಖೆ ರೈತರ ಅನುಕೂಲ ಹಾಗೂ ರೋಗನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳುವ ಭರವಸೆನೀಡಿದರು. ರೇಷ್ಮೆ ವಿಸ್ತರಣಾಧಿಕಾರಿಗಳಾದ ಕೆಂಪೇಗೌಡ, ದೊಡ್ಡಾಲಹಳ್ಳಿ ಇಲಾಖೆಯ ರಾಜು, ಸಿಬ್ಬಂದಿ ರೈತರು ಹಾಜರಿದ್ದರು.
ಹಿಪ್ಪು ನೇರಳೆ ಎಲೆಗಳಕೆಳಭಾಗದಲ್ಲಿ ಬಿಳಿದ್ರವದಂತೆಮಚ್ಚೆ ಕಾಣಿಸಿಕೊಳ್ಳುವುದು. ಆ ಮಚ್ಚೆಯಒಳಗೆ ಮುನ್ನೂರಕ್ಕೂ ಹೆಚ್ಚು ಸೂಕ್ಷ್ಮಹುಳುಗಳ ಮೊಟ್ಟೆ ಇರುತ್ತವೆ. ಇಂತಹಎಲೆಗಳನ್ನು ನಾಶಮಾಡದಿದ್ದರೆ, ಇಡೀತೋಟಕ್ಕೆ ರೋಗ ಹರಡುತ್ತದೆ. ಕೀಟಬಾಧೆಯಿಂದ ಬೆಳೆ ನಾಶಗೊಂಡು ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ. – ಡಾ.ಮಹಿಬಾ ಅಲನ್, ವಿಜ್ಞಾನಿ