Advertisement

ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು !

03:35 PM Jun 15, 2023 | Team Udayavani |

ಹೊಸಕೋಟೆ: ಹವಾಮಾನ ಏರಿಳಿತದಿಂದ ಕಂಗೆಟ್ಟಿರುವ ಕೃಷಿಕರು, ತಮ್ಮಲ್ಲಿರುವ ಅಲ್ಪ ಪ್ರಮಾಣದ ನೀರಿನಲ್ಲೆ ಉತ್ತಮ ರೇಷ್ಮೆಗೂಡು ಬೆಳೆದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೆ ಸಂಕಷ್ಟಗಳ ಸರಮಾಲೆಯನ್ನು ಹೆಗಲೆರಿಸಿಕೊಳ್ಳುವ ಸ್ಥಿತಿ ಬೆಳೆಗಾರರಿಗೆ ಬಂದೊದಗಿದೆ.

Advertisement

500-650 ರೂಪಾಯಿಯ ಅಸುಪಾಸಿ ನಲ್ಲಿದ್ದ ಗೂಡಿನ ಬೆಲೆ ಇದೀಗ 350 ರೂಪಾ ಯಿಗೂ ಏರಿಕೆ ಕಾಣದೆ ತೆವಳುತ್ತಿದೆ. ಸರಿ ಸುಮಾರು 200 ರೂಪಾಯಿಯಷ್ಟು ಬೆಲೆ ಕುಸಿ ಯತ್ತಲಿದ್ದು. ರೈತರು ಸಾಲ- ಸೋಲಾ ಮಾಡಿ ಹಗಲಿರುಳು ಬೆವ ರನ್ನು ಬಸಿದು ರೇಷ್ಮೆ ಗೂಡನ್ನು ಉತ್ಪಾದಿ ಸಿದ್ದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಹಾಕಿದ ಬಂಡವಾಳ ಸಿಗ ದಂತಾಗಿ ಬೆಳೆಗಾ ರರು ದುಸ್ಥಿತಿ ಎದುರಿಸುವಂತಾಗಿದೆ.

ಕೊರೊನಾ ನಂತರ ಕಳೆದ ವರ್ಷ ದಲ್ಲಾಳಿಗಳಿಗೆ ಕಡಿವಾಣ, ಸಿ.ಸಿ.ಟೀವಿ ಅಳವಡಿಕೆ ಇ- ಪೇಮೆಂಟ್‌ ಸೇರಿದಂತೆ ಹಲವು ದಿಟ್ಟ ಕ್ರಮ ಗಳನ್ನು ಇಲಾಖೆ ಕೈಗೊಂಡಿ ದ್ದರಿಂದ ಐತಿ ಹಾಸಿಕ ದಾಖಲೆ ಪ್ರಮಾಣದಲ್ಲಿ ರೇಷ್ಮೆಗೂಡಿನ ಬೆಲೆ ಸಾವಿರಕ್ಕೇರಿ 4 ಅಂಕೆಗಳನ್ನು ದಾಟಿ ಮಾರಾಟವಾಗುವ ಮೂಲಕ ಸದಾ ಸೋಲುಗಳನ್ನೆ ಕಂಡ ರೇಷ್ಮೆ ಬೆಳೆ ಗಾರರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಕಳೆದೆರಡು ತಿಂಗಳಿಂದಲೂ ರೇಷ್ಮೆ ಗೂಡಿನ ಬೆಲೆ 250 ರೂಪಾಯಿಯ ಒಳ ಗಡೆಯೆ ಮುಗ್ಗರಿಸುತ್ತಿದೆ. ಒಂದು ಕಡೆ ಗೂಡಿನ ಬೆಲೆ ಕುಸಿತ, ಚಾಕಿ ಹುಳುವಿನ ಬೆಲೆ, ಕೆಲಸಗಾರರ ಕೂಲಿ, ಹುಳುಮನೆ ಹಾಗೂ ಹಿಪ್ಪುನೇರಳೆಗೆ ಬಳಸುವ ರಾಸಾಯನಿಕ ಇನ್ನಿ ತರೆ ನಿರ್ವಹಣಾ ವೆಚ್ಚವೂ ಗಗನಕ್ಕೇರಿದೆ. ಮಾರಾಟದ ನಂತರ ಕೈಗೆ ಬಂದ ಕಾಸು ಸಮತೂಗಿಸಲು ಸಾಧ್ಯ ವಾಗದಂತಹ ಪರಿಸ್ಥಿತಿ ಎದುರಾಗಿದೆ.

ಗಿಡದಲ್ಲೆ ಬಾಡುತ್ತಿರುವ ಸೊಪ್ಪು: ಹಿಪ್ಪುನೇರಳೆ ಸೊಪ್ಪನ್ನು ಕೊಳ್ಳುವವರಿಲ್ಲದೆ ಸೊಪ್ಪು ಮಾರಿ ಜೀವನ ಸಾಗಿಸುತ್ತಿದ್ದ ರೈತರ ಗೋಳು ಹೇಳತೀರದಾಗಿದೆ. ಕೇಳಿದಷ್ಟು ಬೆಲೆಗೆ ಕೊಡಲು ಮುಂದಾದರೂ ಖರೀದಿ ಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ, ಕಟಾವು ಮಾಡಿ ಜಾನುವಾರುಗಳಿಗೆ ಹಾಕಲು ಮುಂದಾಗಿದ್ದಾರೆ, ಹಲವೆಡೆ ಕಟಾವಾಗದೆ ಗಿಡದಲ್ಲೆ ಸೊಪ್ಪು ಬಾಡುವಂತಾಗಿದೆ.

ಮುಂದುವರಿದ ಕರಿ ನೆರಳು: ರೇಷ್ಮೆಗೂಡಿನ ಬೆಲೆ ಕುಸಿತದ ಕರಿ ನೆರಳು ಮುಂದು ವರೆದಿದ್ದು, ಇದೇ ರೀತಿ ಬೆಲೆ ಕುಸಿಯುತ್ತಿದ್ದರೆ ಈಗಿನ ಬೆಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅಸಲು ಕೈಗೆ ಸಿಗದಂತಾಗಿದೆ. ಮಾಡಿದ ಸಾಲ ತೀರಿಸಲಾಗದೆ, ಮುಂದಿನ ಜೀವನ ನಿರ್ವ ಹಣೆಗೆ ರೇಷ್ಮೆ ಕೃಷಿಗೆ ತಿಲಾಂಜಲಿ ಇಟ್ಟು, ನಗರಗಳತ್ತ ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುವ ಮುನ್ನ ಸರಕಾರ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಬೇಕಾಗಿದೆ.

Advertisement

2.5 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆ ದಿದ್ದು, 150 ಮೊಟ್ಟೆ ಮೇಯಿ ಸುತ್ತೆವೆ. 100 ಕೆ.ಜಿ.ರೇಷ್ಮೆ ಗೂಡು ಉತ್ಪಾದಿಸಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 300ರೂ ರಂತೆ ಮಾರಾಟವಾಗಿದೆ. ಮಾರಾಟದರಕ್ಕಿಂತ ಉತ್ಪಾದನಾ ವೆಚ್ಚ ಅಧಿಕವಾಗಿದ್ದು, ಶ್ರಮಕ್ಕೆ ತಕ್ಕ ಲಾಭ ಸಿಗುತ್ತಿಲ್ಲ, ಈ ಬಗ್ಗೆ ಸರಕಾರ ನಷ್ಟ ಪರಿಹಾರ ನೀಡುವತ್ತ ಗಮನಹರಿಸಬೇಕು. – ಮರಿಯಪ್ಪ , ರೇಷ್ಮೆ ಬೆಳೆಗಾರ

Advertisement

Udayavani is now on Telegram. Click here to join our channel and stay updated with the latest news.

Next