Advertisement
ಇದನ್ನ ಓದಿ:ಚಾ.ನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಧ್ರುವನಾರಾಯಣ
Related Articles
Advertisement
ದಶಕಗಳಷ್ಟು ಇತಿಹಾಸ ಹೊಂದಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪ್ರಮುಖವಾಗಿ ಠೇವಣಿ ಸಂಗ್ರಹ, ಟೆಕ್ ಸಂಸ್ಥೆಗಳಿಗೆ ಸಾಲ ನೀಡುವುದು, ಆನ್ ಲೈನ್ ಬ್ಯಾಂಕಿಂಗ್, ವಿದೇಶಿ ವಿನಿಮಯ ವಹಿವಾಟು ಸೇರಿದಂತೆ ಹಲವು ಸರ್ವೀಸ್ ಗಳನ್ನು ನೀಡುತ್ತಿತ್ತು. ಜಗತ್ತಿನಾದ್ಯಂತ ಎಸ್ ವಿ ಬಿ ಗ್ರಾಹಕರನ್ನು ಹೊಂದಿತ್ತು.
ಸಿಲಿಕಾನ್ ವ್ಯಾಲಿ ಬ್ಯಾಂಕ್ ನ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಎಸ್ ವಿಬಿ ಷೇರು ಮೌಲ್ಯ ಶೇ.60ರಷ್ಟು ಕುಸಿತ ಕಂಡಿತ್ತು. ಇದರ ಪರಿಣಾಮ 80 ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸಿದೆ. ಆದರೂ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿತ್ತಾದರೂ ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಈ ನಿಟ್ಟಿನಲ್ಲಿ ಎಫ್ ಡಿಐಸಿ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಿದೆ.
ಠೇವಣಿ ವಾಪಸ್ ಕೊಡುತ್ತೇವೆ:
ಮಾರ್ಚ್ 13ರಂದು ಸಿಲಿಕಾನ್ ವ್ಯಾಲಿ ಬ್ಯಾಂಕ್ ನ ಕೇಂದ್ರ ಕಚೇರಿ ಮತ್ತು ಎಲ್ಲಾ ಶಾಖೆಗಳನ್ನು ತೆರೆಯಲಿದ್ದು, ವಿಮೆ ಹೊಂದಿರುವ ಠೇವಣಿದಾರರ ಹಣ ನೀಡುವುದಾಗಿ ಎಫ್ ಡಿಐಸಿ ಭರವಸೆ ನೀಡಿದೆ. ಆದರೆ ಎಫ್ ಡಿಐಸಿ ಪ್ರಕಾರ, 2022ರ ಅಂತ್ಯದ ವೇಳೆಗೆ ಬ್ಯಾಂಕ್ ನ 175 ಶತಕೋಟಿ ಡಾಲರ್ ಠೇವಣಿಗಳಲ್ಲಿ ಶೇ.89ರಷ್ಟು ಠೇವಣಿಗಳಿಗೆ ವಿಮೆ ಮಾಡಿಲ್ಲ. ಆ ಗ್ರಾಹಕರ ಠೇವಣಿ ಭವಿಷ್ಯ ಏನು ಎಂಬುದು ಅತಂತ್ರವಾಗಿದೆ ಎಂದು ವರದಿ ತಿಳಿಸಿದೆ.