Advertisement

ಕನ್ನಡ ಅನುಷ್ಠಾನಕ್ಕಾಗಿ ಮೌನ ಪ್ರತಿಭಟನೆ

11:31 AM Nov 19, 2021 | Shwetha M |

ವಿಜಯಪುರ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯಲ್ಲಿ ಎಲ್ಲೆಡೆ ಸಂಪೂರ್ಣ ಕನ್ನಡ ಭಾಷೆ ಜಾರಿಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಾರ್ಯಾಲಯ ಎದುರು ಮೌನ ಪ್ರತಿಭಟನೆ ನಡೆಸಿದರು.

Advertisement

ಕರವೇ ಜಿಲ್ಲಾಧ್ಯಕ್ಷ ಶೇಷರಾವ್‌ ಮಾನೆ ಮಾತನಾಡಿ, ಜಾಗತೀಕರಣ ಪ್ರಭಾವದಿಂದ ನೆಲದ ಭಾಷೆ ಹಿಂದೆ ಸರಿದು ಅನ್ಯ ಭಾಷೆ ಮುನ್ನೆಲೆಗೆ ಬಂದಿದೆ. ಹೀಗಾಗಿ ಯುವ ಪೀಳಿಗೆಗೆ ಮುಖ್ಯವಾಗಿ ಎಲ್ಲರಿಗೂ ಕನ್ನಡ ಭಾಷೆ ಮಹತ್ವ ತಿಳಿಸುವುದೇ ನಮ್ಮ ಗುರಿ. ಪ್ರತಿಯೊಬ್ಬರೂ ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ವ್ಯವಹರಿಸುವುದು ಪ್ರತಿಯೊಬ್ಬ ಅಧಿಕಾರಿ ಕರ್ತವ್ಯ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ ಮಾತನಾಡಿ, ಸಂಘ ಸಂಸ್ಥೆಗಳು, ಸರ್ಕಾರಿ ಹಾಗೂ ಅರೆ ಸರ್ಕಾರಿ ಮಳಿಗೆಗಳ ಮೇಲೆ ಕನ್ನಡದ ನಾಮಫಲಕ ಕಡ್ಡಾಯವಾಗಿರಬೇಕು. ಗ್ರಾಹಕರ ಜೊತೆ ಬ್ಯಾಂಕ್‌ ವ್ಯವಸ್ಥಾಪಕರು ಸಹಕರಿಸುವಂತೆ ಮನವಿ ಮಾಡಿದರು. ಮಾಲತಿ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದ ಮುಗ್ಧ ಜನರು ಬ್ಯಾಂಕ್‌ಗಳಲ್ಲಿ ಅವರಿವರ ಮೊರೆ ಹೋಗಿ ಅರ್ಜಿ ತುಂಬಲು ವಿನಂತಿಸಿಕೊಳ್ಳುತ್ತಾರೆ. ಇದು ನಾಡಿನಲ್ಲಿ ಆರೋಗ್ಯಕರ ಸ್ಥಿತಿ ನಿರ್ಮಾಣವಾಗಿ ಕನ್ನಡದ ಕಂಪು ಹರಡುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ. ಖಲಾಸಿ, ಮಹಾಂತೇಶ ಸಾಸಾಬಾಳ ಮಾತನಾಡಿ, ಇಂಗ್ಲಿಷ್‌ ಭಾಷೆಯಲ್ಲಿರುವ ನಾಮಫಲಕ ತೆರವುಗೊಳಿಸಿ ಕನ್ನಡದಲ್ಲಿ ಬರೆಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಾಬು ಲಮಾಣಿ, ಉದಯ ಕುಲಕರ್ಣಿ, ಸಿದ್ದಪ್ಪ ಹರಿಜನ, ಶಂಕರ ಬಿರಾದಾರ, ಸುಮಿತ್ರಾ ಗೊಣಸಗಿ, ಯಲ್ಲಮ್ಮ ಮುಳವಾಡ, ಜಿ.ಬಿ. ಮಜ್ಜಗಿ, ಐ.ವೈ. ಮುಲ್ಲಾ, ರಾಜು ಪವಾರ, ಸಿದ್ದು ವ್ಯಾಪಾರಿ, ವಸಂತ ಕುಲಕರ್ಣಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next