Advertisement

ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

07:18 PM Oct 09, 2020 | Suhan S |

ಬಳ್ಳಾರಿ: ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ ಯುವತಿ ಮೇಲಿನ ಅತ್ಯಾಚಾರ ಹತ್ಯೆ ಖಂಡಿಸಿ ನಗರದ ಹೊಸಪೇಟೆ ರಸ್ತೆಯಲ್ಲಿನ ಅಂಬೇಡ್ಕರ್‌ ಭವನದ ಎದುರು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರುಗುರುವಾರ ಮೌನ ಪ್ರತಿಭಟನಾ ಧರಣಿ ನಡೆಸಿದರು.

Advertisement

ಉತ್ತರ ಪ್ರದೇಶದಲ್ಲಿ ಅಯೋಧ್ಯೆರಾಮ ಮಂದಿರ ನಿರ್ಮಿಸುವ ಮೂಲಕ ರಾಮ ರಾಜ್ಯ ಮಾಡುತ್ತೇವೆ ಎಂದುರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅ ಧಿಕಾರಕ್ಕೆ ಬಂದ ಬಳಿಕ ರಾವಣ ರಾಜ್ಯ ಮಾಡುತ್ತಿದ್ದಾರೆ. ಮಹಿಳೆಯರ ಅಭಿವೃದ್ಧಿ, ರಕ್ಷಣೆ ಬಗ್ಗೆ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ಈ ಘಟನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಇನ್ನಿತರ ಜನವಿರೋಧಿ ನೀತಿಗಳನ್ನುಜಾರಿಗೆ ತರುವ ಬಗ್ಗೆ ಸಹ ಖಂಡಿಸಿ  ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಅಂಬೇಡ್ಕರ್‌ ಭವನ ಆವರಣದಲ್ಲಿ ಇರುವ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕಗೌರವ ಸೂಚಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್‌. ಮಹ್ಮದ್‌ ರಫೀಕ್‌, ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ, ಅಸುಂಡಿ ಹೊನ್ನೂರಪ್ಪ, ಬೆಣಕಲ್‌ ಬಸವರಾಜ, ಉಪಾಧ್ಯಕ್ಷ ಕಂದರಿ ನಾಗರಾಜ,ಮುಖಂಡರಾದ ನಾಗರಾಜಗೌಡ,ಜಿ.ಜೆ. ರವಿಕುಮಾರ್‌, ಪೆರಂ ವಿವೇಕ್‌,ಪ್ರಧಾನ ಕಾರ್ಯದರ್ಶಿ ಕಾಂತಿನೋಹವಿಲ್ಸನ್‌, ವಿ.ಅರುಣ್‌ ಕುಮಾರ್‌, ಕಾರ್ಯದರ್ಶಿ ಎಂ.ಶಾಂತಮ್ಮ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಹನುಮ ಕಿಶೋರ್‌, ಸರಗು ನಾಗರಾಜ, ರಘುರಾಮ್‌ ರಾಜನ್‌, ಜೈಕುಮಾರ್‌ ನಾಯುಡು, ಕೆ.ತಾಯಪ್ಪ,ದ್ರಾಕ್ಷಾಯಿಣಿ, ಶಮೀಮ್‌ ಭಾನು, ಲಕ್ಷ್ಮೀ, ಬಿ.ಎ.ಪದ್ಮಾವತಿ, ಪ್ರೀತಿ, ಅಲಿವೇಲು ಸುರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next