Advertisement

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ…ಎಚ್ಚರಿಕೆ ಅತ್ಯಗತ್ಯ

05:41 PM Oct 25, 2022 | Team Udayavani |

ಆಧುನಿಕತೆಗೆ ಒಗ್ಗಿಕೊಂಡ ನಾವು ನಾನಾ ರೀತಿಯ ಅನಾರೋಗ್ಯಕರ ಜೀವನಶೈಲಿಯನ್ನು ಪಾಲಿಸುತ್ತಿದ್ದೇವೆ. ಇದರಿಂದಲೇ ರಕ್ತದೊತ್ತಡ, ಮಧುಮೇಹ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಮುಖ್ಯವಾಗಿ ಮಧುಮೇಹ. ಇದನ್ನು ಸೈಲೆಂಟ್‌ ಕಿಲ್ಲರ್‌ ಎಂದು ಕರೆಯುತ್ತಾರೆ. ಯಾಕೆಂದರೆ ಮಧುಮೇಹ ನಮಗರಿವಿಲ್ಲದಂತೆ ದೇಹದಲ್ಲಿದ್ದುಕೊಂಡು ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಕಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ.

Advertisement

ಇನ್ನು ಮಧುಮೇಹ ಬಂದವರು ಆಹಾರಕ್ರಮದ ಬಗ್ಗೆ ಮುನ್ನಚ್ಚರಿಕೆ ವಹಿಸಲೇಬೇಕು. ಮಧುಮೇಹಿಗಳು ಕಾರ್ಬೋಹೈಡ್ರೇಟ್ಸ್‌ ಆಹಾರವನ್ನು ಸೇವಿಸಲೇಬಾರದು ಎನ್ನುತ್ತಾರೆ.

ಆದರೆ ಎಲ್ಲ ಬಗೆಯ ಕಾರ್ಬೋಹೈಡ್ರೇಟ್ಸ್‌ಗಳು ಹಾನಿಕಾರಕವಲ್ಲ. ನಿಯಮಿತ ಪ್ರಮಾಣದಲ್ಲಿ ಕೆಲವೊಂದು ಕಾರ್ಬೋಹೈಡ್ರೇಟ್ಸ್‌ ಇರುವ ಆಹಾರವನ್ನು ಸೇವಿಸಬಹುದು. ಅವುಗಳೆಂದರೆ…

ಕಿಡ್ನಿ ಬೀನ್ಸ್
ಇದರಲ್ಲಿ ಕಾರ್ಬೋಹೈಡ್ರೇಟ್ಸ್‌ ಮತ್ತು ನಾರಿನಾಂಶ ಅಧಿಕವಾಗಿರುತ್ತದೆ. ಇದು ಮಧುಮೇಹಿಗಳಿಗೂ ಅತ್ಯುತ್ತಮ ಆಹಾರ. ತೂಕ ಇಳಿಸಲು ಇದು ಸಹಕಾರಿ.

ಮೊಸರು
ಮೊಸರು ಜೀರ್ಣಕ್ರಿಯೆಗೆ ಅತ್ಯುತ್ತಮ ಆಹಾರ. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬ್ಸ್, ಪ್ರೋಟೀನ್‌ ಇರುವುದರಿಂದ ದಿನದಲ್ಲಿ ಒಂದು ಕಪ್‌ ಸೇವಿಸಬಹುದು.

Advertisement

ಸಿರಿಧಾನ್ಯಗಳು
ಸಿರಿಧಾನ್ಯಗಳಲ್ಲಿ ಪ್ರೋಟೀನ್‌, ನಾರಿನಾಂಶ, ವಿಟಮಿನ್‌ ಹಾಗೂ ಖನಿಜಾಂಶ ಅಧಿಕವಾಗಿದ್ದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ

ಹಣ್ಣುಗಳು
ಸೇಬು, ಕಿತ್ತಳೆ, ಸ್ಟ್ರಾಬೆರಿ, ಬೆರಿ ತಾಜಾ ಹಣ್ಣುಗಳನ್ನು ಅಲ್ಪಪ್ರಮಾಣದಲ್ಲಿ ಮಧುಮೇಹಿಗಳೂ ಸೇವಿಸಬಹುದು. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

ಡ್ರೈಫ್ರುಟ್ಸ್‌ ಮತ್ತು ಬೀಜಗಳು
ಕುಂಬಳಕಾಯಿ ಬೀಜ ಕುಂಬಳಕಾಯಿ ಬೀಜ ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ ಎನ್ನುತ್ತದೆ ಸಂಶೋಧನೆಗಳು. ಅಲ್ಲದೇ ಇದು ರಕ್ತನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಹೀಗಾಗಿ ಮಧುಮೇಹಿಗಳು ಕುಂಬಳಕಾಯಿ ಬೀಜವನ್ನು ಸೇವಿಸಬಹುದು.

Advertisement

Udayavani is now on Telegram. Click here to join our channel and stay updated with the latest news.