Advertisement

ಇಂದು ಮತ ಚಲಾಯಿಸಿದ ಈ ಅಜ್ಜಿಯ ವಯಸ್ಸೆಷ್ಟು ಗೊತ್ತಾ?

09:46 AM Apr 12, 2019 | Team Udayavani |

ಸಿಕ್ಕಿಂ: ಲೋಕಸಭಾ ಚುನಾವಣೆಯ ಮತದಾನ ಹಂತಕ್ಕೆ ಗುರುವಾರದಂದು ಚಾಲನೆ ಸಿಕ್ಕಿದ್ದು 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ 91 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮತಯಂತ್ರ ಗೊಂದಲ, ನಕಲಿ ಮತದಾನದ ಆರೋಪಗಳನ್ನು ಹೊರತುಪಡಿಸಿದಂತೆ ಒಟ್ಟಾರೆಯಾಗಿ ಎಲ್ಲಾ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಇವತ್ತು ಮತದಾನ ನಡೆಯುತ್ತಿರುವ ರಾಜ್ಯಗಳಲ್ಲಿ ಈಶಾನ್ಯ ಭಾಗದ ರಾಜ್ಯಗಳೂ ಸೇರಿದೆ.

Advertisement

ಸಿಕ್ಕಿಂ ರಾಜ್ಯದ ಅತೀ ಹಿರಿಯ ಮತದಾರರೆಂದು ಗುರುತಿಸಲ್ಪಟ್ಟಿರುವ 107 ವರ್ಷದ ಸುಮಿತ್ರಾ ರಾಯ್‌ ಅವರು ಇಂದು ಮತದಾನ ಕೇಂದ್ರಕ್ಕೆ ಆಗಮಿಸಿ ತನ್ನ ಮತವನ್ನು ಯಶಸ್ವಿಯಾಗಿ ಚಲಾಯಿಸಿದರು. ದಕ್ಷಿಣ ಸಿಕ್ಕಿಂನ ಪೊಕ್ಲೊಕ್‌ ಕಮ್ರಂಗ್‌ ಎಂಬಲ್ಲಿರುವ ಕಮ್ರಂಗ್‌ ಸೆಕೆಂಡರಿ ಶಾಲೆಯಲ್ಲಿರುವ ಮತಗಟ್ಟೆಗೆ ವ್ಹೀಲ್‌ ಚಯರ್‌ ಮೂಲಕ ಆಗಮಿಸಿದ ಈ ಹಿರಿಯಜ್ಜಿ ತಮ್ಮ ಹಕ್ಕನ್ನು ಚಲಾಯಿಸಿದರು.


ಮತದಾನದ ಬಳಿಕ ಸುಮಿತ್ರಜ್ಜಿ ಅವರು ಮಾಧ್ಯಮ ಪ್ರತಿನಿಧಿಗಳ ಎದುರು ತಮ್ಮ ಮತ ಗುರುತಿನ ಚೀಟಿಯನ್ನು ಹೆಮ್ಮೆಯಿಂದ ತೋರಿಸಿದ್ದು ವಿಶೇಷವಾಗಿತ್ತು. ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಸುಮಿತ್ರಾ ರಾಯ್‌ ಅವರಿಗೆ ಶಾಲು ಹಾಕಿ ಸಾಂಪ್ರದಾಯಿಕ ಸ್ವಾಗತವನ್ನು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next