Advertisement

Sikkim;ಮಾಜಿ ಶಾಸಕರಿಗೆ ತಿಂಗಳ ಪಿಂಚಣಿ ಈಗ 50 ಸಾವಿರಕ್ಕೆ ಹೆಚ್ಚಳ!

01:41 AM Aug 26, 2024 | Team Udayavani |

ಗ್ಯಾಂಗ್ಟಕ್‌: ಸಿಕ್ಕಿಂನ ಮಾಜಿ ಶಾಸಕರಿಗೆ ಸಿಗುವ ಪಿಂಚಣಿ ದ್ವಿಗುಣವಾಗಲಿದೆ. ಈ ಬಗ್ಗೆ ಅಲ್ಲಿನ ಸಿಎಂ ಪ್ರೇಮ್‌ ಸಿಂಗ್‌ ಥಾಮಂಗ್‌ ಘೋಷಣೆ ಮಾಡಿದ್ದಾರೆ. 1 ಬಾರಿ ಆಯ್ಕೆಯಾಗಿ ಮಾಜಿ ಆಗುವ ಶಾಸಕನಿಗೆ ಪ್ರತೀ ತಿಂಗಳು 50 ಸಾವಿರ ರೂ., 2 ಮತ್ತು ಅದಕ್ಕಿಂತ ಹೆಚ್ಚು ಬಾರಿ ಗೆದ್ದು ಮಾಜಿ ಆಗುವ ಶಾಸಕನಿಗೆ ಪ್ರತೀ ತಿಂಗಳು 55 ಸಾವಿರ ಪಿಂಚಣಿ ಸಿಗಲಿದೆ. ಮಾಜಿ ಶಾಸಕರ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮಾಂಗ್‌ ಮಾತನಾಡಿದ್ದಾರೆ. ಸದ್ಯ ಸಿಕ್ಕಿಂನಲ್ಲಿ ಸದ್ಯ 1 ಬಾರಿಗೆ ಆಯ್ಕೆಯಾದವರಿಗೆ 22 ಸಾವಿರ ರೂ., ಎರಡಕ್ಕಿಂತ ಹೆಚ್ಚು ಅವಧಿಗೆ ಆಯ್ಕೆಯಾದವರಿಗೆ ರೂ.25 ಸಾವಿರ ಕನಿಷ್ಠ ಮಾಸಿಕ ಪಿಂಚಣಿ ನೀಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next