Advertisement

ಸಿಖ್‌ ವ್ಯಕ್ತಿಯ ರೆಸ್ಟಾರೆಂಟ್‌ ಧ್ವಂಸ

08:19 AM Jun 25, 2020 | mahesh |

ವಾಷಿಂಗ್ಟನ್‌: ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಜ್ವಾಲೆಗೆ ಭಾರತೀಯರ ಆಸ್ತಿಪಾಸ್ತಿಗಳೂ ಹಾನಿಗೊಳಗಾಗುತ್ತಿವೆ. ನ್ಯೂ ಮೆಕ್ಸಿಕೊದಲ್ಲಿನ ಸ್ಯಾಂಟ್‌ ಫೆ ಸಿಟಿಯ ಸಿಖ್‌ ಒಡೆತನದ ರೆಸ್ಟಾರೆಂಟ್‌ ಅನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಲ್ಜೀತ್‌ ಸಿಂಗ್‌ ಅವರು ಈ ರೆಸ್ಟಾರೆಂಟನ್ನು 30 ವರ್ಷಗಳಿಂದ ನಡೆಸುತ್ತಿದ್ದರು.

Advertisement

ಇಂಡಿಯಾ ಪ್ಯಾಲೇಸ್‌ ರೆಸ್ಟಾರೆಂಟ್‌ನ ಟೇಬಲ್‌, ಗಾಜಿನ ಸಾಮಾನು, ದೇವಿಯ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಕಂಪ್ಯೂಟರ್‌, ಅಡುಗೆ ಮನೆಯ ವಸ್ತುಗಳನ್ನು ಕದ್ದೊಯ್ಯಲಾಗಿದೆ. ಅಂದಾಜು 1 ಲಕ್ಷ ಡಾಲರ್‌ ಹಾನಿ ಉಂಟಾಗಿದೆ. “ನಿಮ್ಮ ದೇಶಕ್ಕೆ ಹಿಂತಿರುಗಿ, ವೈಟ್‌ ಪವರ್‌, ಟ್ರಂಪ್‌ 2020′ ಎಂಬ ದ್ವೇಷದ ಬರಹಗಳನ್ನು ಗೋಡೆ, ಬಾಗಿಲುಗಳ ಮೇಲೆ ದುಷ್ಕರ್ಮಿಗಳು ಬರೆದಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಎಫ್ಬಿಐ ತನಿಖೆಗೆ ಮುಂದಾ ಗಿದೆ.ಈ ದುಷ್ಕೃತ್ಯವನ್ನು ಸಿಖ್‌ ಅಮೆರಿಕನ್‌ ಲೀಗಲ್‌ ಡಿಫೆನ್ಸ್‌ ಆ್ಯಂಡ್‌ ಎಜುಕೇಶನ್‌ ಫ‌ಂಡ್‌ ತೀವ್ರವಾಗಿ ಖಂಡಿಸಿದೆ.ಇತ್ತೀಚೆಗಷ್ಟೇ ಕೊಲೊರಾಡೊದ ಲೇಕ್‌ವುಡ್‌ನ‌ಲ್ಲಿ ಸಿಖ್‌ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next