ಮಾಣಿಲ: ಸಿಖ್ ದಂಪತಿಗಳನ್ನು ಅವರ ನಿವಾಸದಲ್ಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ಫಿಲಿಪೈನ್ಸ್ ರಾಜಧಾನಿ ಮಾಣಿಲದಲ್ಲಿ ನಡೆದಿದೆ.
ಮೃತ ದಂಪತಿಗಳನ್ನು ಸುಖ್ವಿಂದರ್ ಸಿಂಗ್ (41) ಮತ್ತು ಅವರ ಪತ್ನಿ ಕಿರಣದೀಪ್ ಕೌರ್ (33) ಎನ್ನಲಾಗಿದ್ದು ಇಬ್ಬರೂ ಪಂಜಾಬ್‌ನ ಜಲಂಧರ್ ಜಿಲ್ಲೆಯ ಗೊರಾಯದಿಂದ ಬಂದವರು ಎನ್ನಲಾಗಿದೆ.
ಶನಿವಾರ ರಾತ್ರಿ ಸುಖ್ವಿಂದರ್ ಕೆಲಸದಿಂದ ಹಿಂತಿರುಗಿದ ಕೂಡಲೇ ಮೃತ ದಂಪತಿಗಳ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಿದ ದೃಶ್ಯವನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ. ಕಿರಣ್‌ದೀಪ್‌ಗೆ ಎರಡು ಗುಂಡು ಹಾರಿಸುವ ಮೊದಲು ದಾಳಿಕೋರನು ಸುಖ್ವಿಂದರ್‌ನ ಮೇಲೆ ಅನೇಕ ಗುಂಡುಗಳನ್ನು ಹಾರಿಸುವುದನ್ನು ಕಾಣಬಹುದು. ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುಖ್ವಿಂದರ್ 19 ವರ್ಷಗಳ ಹಿಂದೆ ಫಿಲಿಪ್ಪೀನ್ಸ್‌ನಲ್ಲಿ ನೆಲೆಸಿದ್ದು, ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಮೂರು ವರ್ಷಗಳ ಹಿಂದೆಯಷ್ಟೇ ಕಿರಣ್‌ದೀಪ್ ಅವರನ್ನು ವಿವಾಹವಾಗಿ ಕಳೆದ ಐದು ತಿಂಗಳ ಹಿಂದೆಯಷ್ಟೇ ಮನಿಲಾದಲ್ಲಿ ನೆಲೆಸಿದ್ದರು.
ಘಟನೆ ಕುರಿತು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಆರೋಪಿಯ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ: 10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್: ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ವೈರಲ್