Advertisement

ಸಿಕ್ಖ್ ಯೋಧಗೆ ವಜಾ ಭೀತಿ

06:13 PM Sep 26, 2018 | Team Udayavani |

ಲಂಡನ್‌: ಸಮುದಾಯದ ಸಂಪ್ರದಾಯದಂತೆ ಟರ್ಬನ್‌ ಧರಿಸಿಯೇ ಬ್ರಿಟಿಷ್‌ ರಾಣಿ ಎರಡನೇ ಎಲಿಜಬೆತ್‌ ಹುಟ್ಟು ಹಬ್ಬದಂದು ಪಥಸಂಚಲನದಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದ್ದ 22 ವರ್ಷದ ಮೊದಲ ಸಿಕ್ಖ್ ಯೋಧ ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರು ಕೊಕೇನ್‌ ಸೇವನೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಅವರನ್ನು ಉದ್ಯೋಗದಿಂದ ವಜಾ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚರಣ್‌ಪ್ರೀತ್‌ ಸಿಂಗ್‌ ಲಾಲ್‌ ಕಳೆದ ಜೂನ್‌ನಲ್ಲಿ ಟರ್ಬನ್‌ ಧರಿಸಿಯೇ ಪಥಸಂಚಲನದಲ್ಲಿ ಪಾಲ್ಗೊಂಡು ವಿಶ್ವದ ಗಮನ ಸೆಳೆದಿದ್ದರು. ಕಳೆದವಾರ ನಡೆದ ನಿಷೇಧಿತ ಉದ್ದೀಪನ ದ್ರವ್ಯ ಸೇವನಾ ಪರೀಕ್ಷೆ ವೇಳೆ, ಅವರು ಭಾರೀ ಪ್ರಮಾಣದ ಕೊಕೇನ್‌ ಸೇವಿಸಿದ್ದು ದೃಢಪಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next