Advertisement

ಭಾರತದ ಕೃಷಿ ಕಾಯ್ದೆ ವಿರೋಧಿಸಿ ಅಮೆರಿಕಾದಲ್ಲಿ ಸಿಖ್ ಸಮುದಾಯದಿಂದ ಪ್ರತಿಭಟನೆ

02:57 PM Dec 07, 2020 | Adarsha |

ವಾಷಿಂಗ್ಟನ್: ಸರ್ಕಾರದ ಭೂ ಸುಧಾರಣಾ ಕಾಯ್ದೆಯನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತ ಚಳುವಳಿಗೆ ಅಮೆರಿಕಾದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಭಾರತದ ರೈತರ ಪರವಾಗಿ ಅಮೇರಿಕಾದಲ್ಲಿ ನೂರಾರು ಸಿಖ್ ಧರ್ಮಿಯರು ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ಕ್ಯಾಲಿಫೋರ್ನಿಯಾದ ಅನೇಕ ಪ್ರದೇಶಗಳಿಂದ ಆಗಮಿಸಿರುವ ಪ್ರತಿಭಟನಾಕಾರರು ಸ್ಯಾನ್ ಪ್ರಾಸ್ಸಿಕ್ಸ್ಕೋದ ಭಾರತೀಯ ಕಂನ್ಸುಲೇಟ್ ಗೆ ತೆರಳುವ ಮಾರ್ಗದ ಬೇ ಬ್ರಿಡ್ಜ್ ನಲ್ಲಿ ವಾಹನ ಸಂಚಾರಕ್ಕೆ  ತಡೆಒಡ್ಡಿದ್ದಾರೆ. ಹಲವಾರು ಪ್ರತಿಭಟನಾಕಾರರು ಇಂಡಿಯಾನಾ ಪೊಲೀಸ್ ನ ಡೌನ್ ಟೌನ್ ನಲ್ಲಿ ಜಮಾಯಿಸಿದ್ದರು.

ಈ ನಡುವೆ ಹ್ಯೂಸ್ಟನ್, ಸೀಚಿಗನ್, ನ್ಯೂಯಾರ್ಕ್ ನಗರಗಳಲ್ಲೂ ಪ್ರತಿಭಟನೆಗಳು ನಡೆದಿರುದಾಗಿ ವರದಿಯಾಗಿದ್ದು, ‘ರೈತರನ್ನು ರಕ್ಷಿಸಿ’  ಎಂಬ ಬರಹಗಳನ್ನು ಪ್ರದರ್ಶಿಸಿದರು. ಅಲ್ಲದೆ ಭಾರತದಲ್ಲಿನ ಹೊಸ ಕೃಷಿ ಮಸೂದೆಯು ರೈತರನ್ನು ಮತ್ತಷ್ಟು ಬಡತನದೆಡೆಗೆ ಕೊಂಡೊಯ್ಯುತ್ತಿದೆ ಎಂದು  ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ದಿಲ್ಲಿ ಚಲೋ ಪ್ರತಿಭಟನೆ ಮತ್ತಷ್ಟು ತೀವ್ರ; ಸಿಂಘು ಗಡಿಗೆ ಸಿಎಂ ಕೇಜ್ರಿವಾಲ್ ಭೇಟಿ

ರೈತರು ಯಾವುದೇ ದೇಶಕ್ಕಾದರೂ ಆತ್ಮಕ್ಕೆ ಸಮಾನವಾದವರಾಗಿರುತ್ತಾರೆ. ನಾವು ಆ ನಮ್ಮ  ಆತ್ಮವನ್ನು ರಕ್ಷಿಸಬೇಕು. ಹಾಗಾಗಿ ಈ ಕಾಯ್ದೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ ಹಾಗೂ ಕೆನಡಾ ಸೇರಿದಂತೆ ವಿಶ್ವದಾದ್ಯಂತದ ಬೇರೆ ಬೇರೆ ಪ್ರದೇಶದ ಜನರು ಒಟ್ಟಾಗಿ ಸೇರಿದ್ದೇವೆ. ಆ ಮೂಲಕ ಭಾರತದ ರೈತರು ತಾವು ಬೆಳೆದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಇದು ಸಹಕಾರಿಯಾಗಲಿದೆ ಎಂದು  ಭಾರತೀಯ ಮೂಲದ ಗುರಿಂದರ್ ಸಿಂಗ್ ಖಾಲ್ಸಾ ತಿಳಿಸಿದ್ದಾರೆ.

Advertisement

ಖಾಲ್ಸಾ ಅವರು ಈ ರ್ಯಾಲಿಯ ನಾಯಕತ್ವವನ್ನು ವಹಿಸಿದ್ದು, ಇಂಡಿಯಾನಾದ ವಿವಿಧ ಭಾಗಗಳ 500 ಕ್ಕೂ ಅಧಿಕ ಸಿಕ್ ಅಮೇರಿಕನ್ನರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಈ ಹಿಂದೆ ಶಿಖಾಗೋದ ಸಿಖ್ ಅಮೇರಿಕನ್ನರು ವಾಷಿಂಗ್ ಟನ್ ಡಿ ಸಿ ಯಲ್ಲಿರುವ ಭಾರತೀಯ ದೂತವಾಸ ಕಚೇರಿಯ ಬಳಿ ಪ್ರತಿಭಟನೆ ನಡೆಸಿದ್ದರು.  ಅಲ್ಲದೆ ಭಾರತದ ಕೃಷಿ ಮಸೂದೆ ವಿರೋಧಿಸಿ ಲಂಡನ್ ಸಿಖ್ ಸಮುದಾಯವರೂ ಕೂಡಾ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next